Monday, April 21, 2025
Google search engine

Homeರಾಜ್ಯಹುಲಿ ಉಗುರು ವಿವಾದ: ನನ್ನ ಪುತ್ರ ಧರಿಸಿರುವುದು ಪ್ಲಾಸ್ಟಿಕ್ ಹುಲಿ ಉಗುರು: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಹುಲಿ ಉಗುರು ವಿವಾದ: ನನ್ನ ಪುತ್ರ ಧರಿಸಿರುವುದು ಪ್ಲಾಸ್ಟಿಕ್ ಹುಲಿ ಉಗುರು: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಬೆಳಗಾವಿ: ತಮ್ಮ ಪುತ್ರನ ಕೊರಳಲ್ಲಿ ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿದ್ದ ಫೋಟೊ ವೈರಲ್ ಆಗುತ್ತಿರುವ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಯದಲ್ಲಿ ಯಾರೋ ಉಡಯಗೊರೆ ಕೊಟ್ಟಿದ್ದರು ಅಂತ ಅದನ್ನ ಹಾಕಿದ್ದ. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್ ನದ್ದು. ಅದು ಅಸಲಿ ಪೆಂಡೆಂಟ್ ಅಲ್ಲ. ನಾನೂ ಸಸ್ಯಾಹಾರಿ ಹುಲಿ ಜಿಂಕೆ ಕೋಳಿ, ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ ಎಂದು ಸ್ಪಷ್ಟಪಡಿಸಿದರು.

ಮೂರು ವರ್ಷಗಳ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಂಚಿಕೊಂಡಿದ್ದ ತಮ್ಮ ಮಗಳ ಮದುವೆಯ ಫೋಟೋ ಆಲ್ಬಮ್‌ಗಳಲ್ಲಿ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಮತ್ತು ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಇರುವುದು ಕಂಡು ಬಂದಿದೆ. ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಆಗಮಿಸಿರುವ ಅರಣ್ಯಾಧಿಕಾರಿಗಳು ಹುಲಿ ಉಗುರು ಹೋಲುವ ಪೆಂಡೆಂಟ್ ಅನ್ನು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular