ಮೈಸೂರು: ಪ್ರಾಣಿ ಪ್ರಿಯರಿಗೆ ವನ್ಯಜೀವಿಗಳು ಕಾಣ ಸಿಕ್ಕರೆ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಂತೆಯೇ ಇಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಹನ ಸವಾರರಿಗೆ ಹುಲಿರಾಯನ ದರ್ಶನವಾಗಿದೆ.
ಗುರುವಾರ ಬೆಳ್ಳಂಬೆಳಗ್ಗೆ ಹುಣಸೂರಿನಿಂದ ಕುಟ್ಟಾಗೆ ತೆರಳುವ ವಾಹನ ಸವಾರರಿಗೆ ಮಾರ್ಗ ಮಧ್ಯೆ ಮೂರ್ಕಲ್ ಗೇಟ್ ಹುಲಿರಾಯ ರಸ್ತೆ ದಾಟಿದ್ದಾನೆ. ಹುಲಿ ರಸ್ತೆ ದಾಟುವ ದೃಶ್ಯವನ್ನು ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.