ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹಾದೇವಪುರ ಗ್ರಾಮದ ಬಳಿ ಹುಲಿ ಪ್ರತ್ಯಕ್ಷವಾಗಿದ್ದು, ಹುಲಿ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗ್ರಾಮದ ಬಳಿ ಜಮೀನಿನಲ್ಲಿ ಹುಲಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಲಿ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹುಲಿ ಸೆರೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.
ಡೆಪ್ಯೂಟಿ ಆರ್‌ಎಫ್‌ಒ ಶಿವು ನೇತೃತ್ವದಲ್ಲಿ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಸುಮಾರು ೨೦ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಹುಲಿಗಾಗಿ ಹುಡುಕಾಟ ನಡೆಯುತ್ತಿದೆ. ಹೆಜ್ಜೆ ಗುರುತು ನೋಡಿದರೆ ಹುಲಿಯಂತೆ ಕಾಣುತ್ತಿದೆ, ಆದರೆ ಹುಲಿ ಎಂದು ಖಚಿತವಾಗಿ ಹೇಳಲು ಆಗಲ್ಲ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ. ಇನ್ನು ಹುಲಿ ಪ್ರತ್ಯಕ್ಷದಿಂದ ಗದ್ದೆ ಕೆಲಸಗಾರರು ಬಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಆದಷ್ಟು ಬೇಗ ಹುಲಿ ಸೆರೆ ಹಿಡಿಯುವಂತೆ ಮಾಧ್ಯಮಗಳ ಮುಂದೆ ಸ್ಥಳೀಯ ರೈತ ಅಶೋಕ ಒತ್ತಾಯ ಮಾಡಿದ್ದಾರೆ.