Saturday, August 2, 2025
Google search engine

Homeರಾಜ್ಯಸುದ್ದಿಜಾಲಸ್ವಾತಂತ್ರ್ಯದ ಪ್ರೇರಕ ತಿಲಕ್: ನಿಜವಾದ ದೇಶಭಕ್ತನ ಆದರ್ಶ ಬದುಕು – ಸುರೇಶ್ ಎನ್ ಋಗ್ವೇದಿ

ಸ್ವಾತಂತ್ರ್ಯದ ಪ್ರೇರಕ ತಿಲಕ್: ನಿಜವಾದ ದೇಶಭಕ್ತನ ಆದರ್ಶ ಬದುಕು – ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು. ಅದನ್ನು ಪಡೆದೆ ತೀರುವೆ ಎಂದು ವೀರ ಘೋಷಣೆ ನೀಡಿ ಕೋಟ್ಯಾಂತರ ಭಾರತೀಯರಲ್ಲಿ ಸ್ವಾತಂತ್ರ್ಯ ಚಳುವಳಿಯ ಸ್ಪೂರ್ತಿಯನ್ನು ತುಂಬಿದ ಬಾಲಗಂಗಾಧರ ತಿಲಕ ರವರು ಪರಮ ದೇಶಾಭಿಮಾನಿಗಳು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಕುಟೀರದ ಮುಂಭಾಗದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಬಾಲಗಂಗಾಧರ ತಿಲಕ್ ರವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಬಾಲಗಂಗಾಧರ ತಿಲಕ್ ರವರು ಗಣೇಶ ಉತ್ಸವ ,ಶಿವಾಜಿ ಉತ್ಸವಗಳನ್ನು ಆರಂಭಿಸಿ ಭಾರತೀಯರಲ್ಲಿ ಭಾವೈಕ್ಯತೆ, ಏಕತೆ, ಸಂಘಟನೆ ರೂಪಿಸಿದ ಮಹಾನ್ ದೇಶಭಕ್ತರು. ಜನರಲ್ಲಿ ಧೈರ್ಯ, ತ್ಯಾಗ, ಧಾರ್ಮಿಕ ಹಾಗೂ ದೇಶದ ಅಭಿಮಾನವನ್ನು ವೃದ್ಧಿಗೊಳಿಸಿ ಹೊಸ ಹುರುಪಿನಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ದಿಕ್ಕಿನಲ್ಲಿ ತಿಲಕ್ ರವರ ಕೊಡುಗೆ ಮರೆಯಲಾಗದು. ತಮ್ಮ ಪತ್ರಿಕೆಗಳಾದ ಕೇಸರಿ ಮತ್ತು ದಿ ಮರಾಠ ಪತ್ರಿಕೆಗಳ ಮೂಲಕ ದೇಶಾಭಿಮಾನದ ಲೇಖನಗಳನ್ನು ಬರೆಯುವ ಮೂಲಕ ಬ್ರಿಟಿಷರ ವಿರುದ್ಧ ಚಿಂತನೆ ನಡೆಸಲು ಅವರ ಲೇಖನಗಳು ತುಂಬಾ ಪರಿಣಾಮವನ್ನು ನೀಡಿತು.

ದೇಶದಲ್ಲಿ ಉಂಟಾದ ಬರಗಾಲ ಹಾಗೂ ಪ್ಲೇಗ್ ಹಾವಳಿಯಲ್ಲಿ ತೊಂದರೆಗೆ ಸಿಲುಕಿದ ಜನರನ್ನು ಹೊರಬರುವಂತೆ ಮಾಡುವಲ್ಲಿ ತಿಲಕ್ ರವರ ಶ್ರಮ ಅಪಾರವಾದದ್ದು. ದೇಶ ಜನರ ಆಪದ್ಭಾಂದವರಾಗಿ ಸೇವೆ ಸಲ್ಲಿಸಿದವರು. ಇಂಗ್ಲಿಷರ ಭೇದೋಪಾಯ ನೀತಿಯ ವಿರುದ್ಧ ಹೋರಾಟ ನಡೆಸಿ ವಂಗಭಂಗ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ತಿಲಕ್ ರವರು. ಹಲವಾರು ಬಾರಿ ಸೆರೆಮನೆ ಸೇರಿದ ತಿಲಕರವರು ಸೆರೆಮನೆಯಲ್ಲಿಯೂ ಗೀತಾ ರಹಸ್ಯ ಎಂಬ ಶ್ರೇಷ್ಠ ಪುಸ್ತಕವನ್ನು ಬರೆದು ಯುವಕರಲ್ಲಿ ಚೈತನ್ಯವನ್ನು ತುಂಬಿದವರು. ತಿಲಕ್ ರವರ ಸಾಹಸ ,ಧೈರ್ಯ ದೇಶಾಭಿಮಾನ ,ಸ್ವದೇಶಿ ಚಿಂತನೆ ಭಾರತೀಯ ಯುವಕರು ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸ್ವಾತಂತ್ರ್ಯ ಚಳುವಳಿಯನ್ನು ತೀವ್ರ ಜನಾಂದೋಲನವಾಗಿ ರೂಪಿಸಿದ ತಿಲಕರವರನ್ನು ಗೌರವಯುತವಾಗಿ ಲೋಕಮಾನ್ಯ ಎಂದು ಭಾರತೀಯರು ಇಂದಿಗೂ ಗೌರವಿಸುತ್ತಿರುವುದನ್ನು ಕಾಣಬಹುದು .ಆಗಸ್ಟ್ ಒಂದು ಅವರ ವೀರಮರಣ ಹೊಂದಿದ ದಿನ. ತಿಲಕ್ ರವರ ದೇಶಭಕ್ತಿ ಸರ್ವರಿಗೂ ಆದರ್ಶವಾಗಲಿದೆ ಎಂದು ತಿಳಿಸಿದರು.

ಹರದನಹಳ್ಳಿ ಗಜೇಂದ್ರ ರವರು ಬಾಲಗಂಗಾಧರ ತಿಲಕರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವ ನಮನವನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭೋಜರಾಜ್, ಮಂಗಲದ ನಂಜುಂಡಸ್ವಾಮಿ, ಪಾಂಡು , ರವಿ ಮತ್ತು ಮಹೇಶ್, ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular