ಮಂಗಳೂರು(ದಕ್ಷಿಣ ಕನ್ನಡ): ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ 38ನೇ ಎಕ್ಸ್ ಪರ್ಟ್ ದಿನಾಚರಣೆ ಹಿನ್ನೆಲೆಯಲ್ಲಿ ಡಿ.30ರಂದು ಸಂಜೆ 5.30ರಿಂದ ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ ನಲ್ಲಿ ‘ಟೈಂ ಸ್ಟೇರ್ ಮ್ಯೂಸಿಕ್ ಫೆಸ್ಟಿವಲ್’ ಆಯೋಜಿಸಲಾಗಿದ್ದು, ತಾಳವಾದ್ಯದಲ್ಲಿ ವಿಶ್ವಖ್ಯಾತಿ ಪಡೆದಿರುವ ದಿಗ್ಗಜ ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡದಿಂದ ‘ಲಯಲಾವಣ್ಯ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 29ರಂದು ವಳಚ್ಚಿಲ್ ಕ್ಯಾಂಪಸ್‌ನಲ್ಲಿ 38ನೇ ಎಕ್ಸ್‌ಪರ್ಟ್ ದಿನಾಚರಣೆ ನಡೆಯಲಿದೆ. ಇದರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಡಿ.30ರಂದು ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಿಯಾಲ್‌ಬೈಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಅವರು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.