Monday, August 4, 2025
Google search engine

Homeಸ್ಥಳೀಯಕೆಆರ್‌ಎಸ್‌ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು : ಸಚಿವರ ಹೇಳಿಕೆಗೆ ಸಂಸದ ಯದುವೀರ್ ತಿರುಗೇಟು

ಕೆಆರ್‌ಎಸ್‌ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು : ಸಚಿವರ ಹೇಳಿಕೆಗೆ ಸಂಸದ ಯದುವೀರ್ ತಿರುಗೇಟು

ಮೈಸೂರು : ರಾಜ್ಯ ರಾಜಕಾರಣದಲ್ಲಿ ಕ್ರೆಡಿಟ್ ವಾರ್ ಮುಂದುವರೆದಿದ್ದು, ಇದೀಗ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮೊದಲು ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದು, ಇಲ್ಲಸಲ್ಲದ ಮಾತು ಬೇಡ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಕೆ ಆರ್ ಎಸ್ ಗೆ ಟಿಪ್ಪು ಸುಲ್ತಾನ್ ಮೊದಲು ಅಡಿಗಲ್ಲು ಹಾಕಿದ್ದರು ಎಂದು ಎಲ್ಲೂ ಸಾಕ್ಷಿಯಿಲ್ಲ. ಸಾಮಾನ್ಯವಾಗಿ ಇತಿಹಾಸದ ಬಗ್ಗೆ ಯಾವುದೇ ವಿಚಾರದ ಬಗ್ಗೆ ಮಾತನಾಡುವುದಾದರೆ ಸರಿಯಾದ ಸಾಕ್ಷಿಯನ್ನು ಇಟ್ಟುಕೊಂಡು ಮಾತಾಡಬೇಕು ಎಂದು ಕಿಡಿಕಾರಿದರು..

ಸಾಕ್ಷಿ ಇಲ್ಲದೆ ನಿಮಗೆ ಬೇಕಾದ ಹಾಗೆ ಮಾತಾಡುವುದು ಸರಿಯಲ್ಲ, ಕೆ ಆರ್ ಎಸ್ ಕಟ್ಟಿದ್ದಾಗಿನಿಂದ ಅದಕ್ಕೆ ಯಾರೆಲ್ಲ ಶ್ರಮವಹಿಸಿದ್ದಾರೆ, ಅದಕ್ಕೆ ಅಡಿಪಾಯ ಹಾಕಿದ್ದು ಯಾರು ಎಂಬುವುದು ಎಲ್ಲರಿಗೂ ಗೊತ್ತಿದೆ ಸಾಕ್ಷಿಗಳು ಕೂಡ ಇದೆ. ಆದರೆ ಸಚಿವ ಮಹದೇವಪ್ಪ ನವರು ಇಲ್ಲಸಲ್ಲದ ಹೇಳಿಕೆ ನೀಡಿ ಇತಿಹಾಸವನ್ನು ತಿರುಚುವ ಬದಲು ಉತ್ತಮ ಆಡಳಿತ ನೀಡಿ ಎಂದು ಯದುವೀರ್ ಒಡೆಯರ್ ತಿಳಿಸಿದರು.

ಅಲ್ಪಸಂಖ್ಯಾತರಿಗೆ ಯಾರನ್ನಾದರೂ ಮಾದರಿಯಾಗಿ ತೋರಿಸಬೇಕು ಅಂದರೆ ಇತಿಹಾಸದಲ್ಲಿ ಅನೇಕ ಮಹನೀಯರು ಇದ್ದಾರೆ.. ಅಂತವರನ್ನು ಉಲ್ಲೇಖ ಮಾಡಲಿ, ಆದರೆ ಸಚಿವ ಮಹದೇವಪ್ಪ ಹೇಳಿಕೆ ನಾನು ಎಲ್ಲಿಯೂ ಕೇಳಿಲ್ಲ. ಮತದಾರರನ್ನು ಒಲೈಸಲು ಅವರವರಿಗೆ ಬೇಕಾದಂತೆ ಹೇಳಿಕೆ ಕೊಡುತ್ತಿದ್ದಾರೆ ಇದು ನಿಜಕ್ಕೂ ತಪ್ಪು ಎಂದು ಸಂಸದ ಯದುವೀರ್ ಒಡೆಯರ್ ಆಕ್ರೋಶ ಹೊರಹಾಕಿದರು.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕನ್ನಂಬಾಡಿ ಕಟ್ಟೋದಕ್ಕೆ ಅಡಿಗಲ್ಲು ಹಾಕಿದ್ದಾರೆ. ಆದರೆ ಈಗ ಅದರ ಬಗ್ಗೆ ಮಾತನಾಡೋಕೆ  ಯಾರಿಗೂ ಧೈರ್ಯ ಇಲ್ಲ. ಕೆ.ಆರ್.ಎಸ್. ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ನಾವು ನೋಡಬಹುದು ಎಂದು ಅವರು ಹೇಳಿದ್ದಾರೆ.

ಮೈಸೂರಿನ ಅರಮನೆ ಇದ್ದಿದ್ದು ಶ್ರೀರಂಗಪಟ್ಟಣದಲ್ಲೇ ಇತ್ತು. ಇನ್ನು ಟಿಪ್ಪು ದೇವದಾಸಿ ಪದ್ಧತಿ ರದ್ದು ಮಾಡಿದ್ದರು. ಶೋಷಿತರ ಮಹಿಳೆಯರನ್ನು ಏವದಾಸಿ ಪದ್ಧತಿಗೆ ದೂಡುತ್ತಿದ್ದರು. ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದ್ದು ಟಿಪ್ಪು ಎಂದು ಮಹದೇವಪ್ಪ ಹೇಳಿದ್ದಾರೆ. ಇದಲ್ಲದೇ, ಟಿಪ್ಪು ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ಭಾರತ ದೇಶಕ್ಕೆ ಸಿರಿಕಲ್ಚರ್ ರೇಷ್ಮೆ ತಂದಿದ್ದೆ ಟಿಪ್ಪು ಸುಲ್ತಾನ್ ಅವರು. ಬ್ರಿಟಿಷರ ಜೊತೆ ಹೋರಾಟ ಮಾಡಿದ ಸೇನಾನಿ ಅವರು. ಇದನ್ನ ಅನೇಕ ಜನರು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular