Monday, May 19, 2025
Google search engine

Homeಸ್ಥಳೀಯಆಪರೇಷನ್ ಸಿಂಧೂರ ಯಶಸ್ಸಿಗೆ ಬೆಂಬಲವಾಗಿ ಮೈಸೂರಿನಲ್ಲಿ ತಿರಂಗಾಯಾತ್ರೆ : ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಭಾಗಿ

ಆಪರೇಷನ್ ಸಿಂಧೂರ ಯಶಸ್ಸಿಗೆ ಬೆಂಬಲವಾಗಿ ಮೈಸೂರಿನಲ್ಲಿ ತಿರಂಗಾಯಾತ್ರೆ : ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಭಾಗಿ

ಮೈಸೂರು: ಉಗ್ರರು, ಪಾಕ್ ವಿರುದ್ದ ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆ ಮೈಸೂರಿನಲ್ಲೂ ಇಂದು ಬಿಜೆಪಿಯಿಂದ ತಿರಂಗಾ ಯಾತ್ರೆ ಆಯೋಜನೆ ಮಾಡಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿ ಸಾವಿರಾರು ಜನ ಭಾಗಿಯಾಗಿದ್ದರು.

ತಿರಂಗಾ ಯಾತ್ರೆಯು ನಗರದ ಮೆಟ್ರೊಪಾಲ್ ವೃತ್ತದಿಂದ ಶಿವರಾಂಪೇಟೆ ಬೀದಿ ಮೂಲಕ ಸಾಗಿ ಚಿಕ್ಕ ಗಡಿಯಾದ ಬಳಿ ಬಲಕ್ಕೆ ತಿರುಗಿ ಅರಸು ರಸ್ತೆ ಮೂಲಕ  ಮತ್ತೆ ಮೆಟ್ರೋಪಾಲ್ ವೃತ್ತಕ್ಕೆ ಬಂದು ಕೊನೆಗೊಂಡಿತು.

ತಿರಂಗಯಾತ್ರೆಯಲ್ಲಿ ಜೆಎಸ್ಎಸ್ ದೇಶೀಕೇಂದ್ರ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಬಿಜಿಎಸ್ ಸೋಮನಾಥೇಶ್ವರ ಸ್ವಾಮೀಜಿ ಮತ್ತು ವಿವಿಧ ಧರ್ಮದ ಧಾರ್ಮಿಕ ಗುರುಗಳು, ಮೈಸೂರು-ಕೊಡಗು ಸಂಸದ ಯದುವೀರ್, ಶಾಸಕ ಶ್ರೀವತ್ಸ, ಎಂಎಲ್ಸಿ ಮಂಜೇಗೌಡ, ಮಾಜಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ಹಲವು ಮಾಜಿ ಸೈನಿಕರ ಸಮ್ಮುಖದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಕಾರ್ಯಕರ್ತರು, ಮೈಸೂರಿನ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಭಾಗಿಯಾಗಿದ್ದರು. ನಿರೀಕ್ಷೆಗೂ ಮೀರಿ ಪಕ್ಷತೀತವಾಗಿ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular