Sunday, April 20, 2025
Google search engine

Homeಸ್ಥಳೀಯಸಚಿವ ಕೆ.ವೆಂಕಟೇಶ್ ಕಿರುಕುಳಕ್ಕೆ ಬೇಸತ್ತ ಮೈಮುಲ್ ಅಧ್ಯಕ್ಷ ರಾಜೀನಾಮೆ!

ಸಚಿವ ಕೆ.ವೆಂಕಟೇಶ್ ಕಿರುಕುಳಕ್ಕೆ ಬೇಸತ್ತ ಮೈಮುಲ್ ಅಧ್ಯಕ್ಷ ರಾಜೀನಾಮೆ!

ಮೈಸೂರು : ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಕಿರುಕುಳದಿಂದ ಬೇಸತ್ತು ನಾನು ಮೈಸೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪಿ.ಎಂ. ಪ್ರಸನ್ನ ತಿಳಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ವಿಚಾರ ಉರುಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ರಾಜಕೀಯ ಕಾರಣಕ್ಕೆ ನನಗೆ ಬಹಳ ಕಿರುಕುಳ ಕೊಡುತ್ತಿದ್ದಾರೆ. ವಾಸ ದೃಢೀಕರಣ ಪತ್ರದ ವಿಚಾರದಲ್ಲಿ ಪದೇ ಪದೇ ನೋಟೀಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ. ನಾನು ರಾಜೀನಾಮೆ ಕೊಡದೆ ಇದ್ದರೆ, ಎಲ್ಲಾ ಪದಾಧಿಕಾರಿಗಳ ವಜಾಕ್ಕೆ ವಾಮಾಮಾರ್ಗದ ಮೂಲಕ ಯತ್ನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟ ಬಳಿಯೂ ೨೮ಸಿ ಅನುಸಾರ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ. ಪಿರಿಯಾಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವ ಕೆ.ವೆಂಕಟೇಶ್ ಧ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಈ ರೀತಿ ಮಾಡುತ್ತಿದ್ದಾರೆ. ಹೀಗಾಗಿ, ಅವರ ಕಿರುಕುಳದಿಂದ ಬೇಸತ್ತಿ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular