ತೀರ್ಥಹಳ್ಳಿ : ಬೆಳ್ಳಂ ಬೆಳಗ್ಗೆ ತೀರ್ಥಹಳ್ಳಿಗೆ ಇ.ಡಿ ಅಧಿಕಾರಿಗಳು ಡೌಡಾಯಿಸಿದ್ದು ಪ್ರತಿಷ್ಠಿತ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ.
ಪ್ರಖ್ಯಾತ ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್ ಹಾಗೂ ಇಂಡಿಯನ್ ಗ್ಯಾಸ್ ಗೋಡನ್, ಹಾಗೂ ನ್ಯಾಷನಲ್ ಸಂಸ್ಥೆಯ ಮಾಲೀಕರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನೆಡೆಸುತ್ತಿದ್ದಾರೆ.
ತಾಲೂಕಿನ ಹಾಗೂ ರಾಜ್ಯದ ಹಲವೆಡೆ ರಸ್ತೆಯ ಕಾಮಗಾರಿಗಳನ್ನು ಈ ಸಂಸ್ಥೆಯೇ ವಹಿಸಿಕೊಳ್ಳುತ್ತಿದ್ದು, ಈ ಎಲ್ಲಾ ಕಾರಣಗಳಿಂದ ಹಣದ ವಿಚಾರದಲ್ಲಿ ಲೋಪ ಕಂಡು ಬಂದಿದ್ದಲ್ಲಿ ಅಧಿಕಾರಿಗಳು ದಾಳಿ ನೆಡೆಸಿರುವ ಶಂಕೆಯಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.