Friday, April 4, 2025
Google search engine

Homeಅಪರಾಧತಿರುಪತಿ ಕಾಲ್ತುಳಿತ: ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಣೆ

ತಿರುಪತಿ ಕಾಲ್ತುಳಿತ: ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಣೆ

ತಿರುಪತಿ : ಬುಧವಾರ ರಾತ್ರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪವಿತ್ರ ಕಾರ್ಯಕ್ರಮದ ಟಿಕೆಟ್ ವಿತರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಆರು ಭಕ್ತರ ಕುಟುಂಬಗಳಿಗೆ ಆಂಧ್ರ ಪ್ರದೇಶ ಸರ್ಕಾರ ಗುರುವಾರ ತಲಾ ೨೫ ಲಕ್ಷ ಪರಿಹಾರ ಘೋಷಿಸಿದೆ.

ಘಟನೆಯಲ್ಲಿ ಏಳು ಜನರು ಮೃತಪಟ್ಟು ೪೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆಂಧ್ರ ಪ್ರದೇಶದ ಕಂದಾಯ ಸಚಿವ ಅನಗಣಿ ಸತ್ಯ ಪ್ರಸಾದ್, “ನಾವು ಜೀವವನ್ನು ಬೇರೆ ಯಾವುದರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಕುಟುಂಬಗಳಿಗೆ ಬೆಂಬಲ ನೀಡುತ್ತೇವೆ. ನಾವು ೨೫ ಲಕ್ಷಗಳನ್ನು ಘೋಷಿಸಿದ್ದೇವೆ. ಮುಖ್ಯಮಂತ್ರಿ ಗಾಯಗೊಂಡ ಜನರೊಂದಿಗೆ ಮಾತನಾಡುತ್ತಾರೆ” ಎಂದು ಹೇಳಿದರು.
ಸಚಿವರ ತಂಡವು ರುಯಾ ಆಸ್ಪತ್ರೆಯಲ್ಲಿ ಮೃತರ ಕುಟುಂಬಗಳನ್ನು ಭೇಟಿ ಮಾಡಿದ ನಂತರ ಕಂದಾಯ ಸಚಿವ ಸತ್ಯ ಪ್ರಸಾದ್ ಈ ಘೋಷಣೆ ಮಾಡಿದರು. ಸಚಿವರಾದ ಅನಿತಾ, ಪಾರ್ಥಸಾರಥಿ ಮತ್ತು ಅನಮ್ ರಾಮನಾರಾಯಣ ರೆಡ್ಡಿ ಅವರನ್ನೊಳಗೊಂಡ ನಿಯೋಗವು ಎಸ್‌ವಿಐಎಂಎಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿತು.

ಸಚಿವರು ಈ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದರು. ಈ ಘಟನೆಯು ಯಾವುದೇ ಆತುರದ ಕ್ರಮ ಅಥವಾ ಸಮನ್ವಯದ ಕೊರತೆಯಿಂದ ಉಂಟಾಗಿದೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಇದು ಅಪಘಾತವೋ ಅಥವಾ ಪಿತೂರಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವೆ ಅನಿತಾ ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳು ಯಾರ ತಪ್ಪುಗಳಿಂದ ಈ ದುರಂತ ಸಂಭವಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಮೃತರ ಶವಗಳನ್ನು ಶವಪರೀಕ್ಷೆಯ ನಂತರ ಆಯಾ ಪಟ್ಟಣಗಳಿಗೆ ಕಳುಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮೃತರಲ್ಲಿ ಮೂವರು ವಿಶಾಖಪಟ್ಟಣಂನವರು ಮತ್ತು ಒಬ್ಬರು ನರಸಿಪಟ್ಟಣಂನವರು. ಉಳಿದ ಇಬ್ಬರು ಬಲಿಪಶುಗಳು ತಮಿಳುನಾಡು ಮತ್ತು ಕೇರಳದವರು. ಜನವರಿ ೧೦ ರಂದು ಪ್ರಾರಂಭವಾಗುವ ವಾರ್ಷಿಕ ವೈಕುಂಠ ಏಕಾದಶಿ ಉತ್ಸವದ ಸಮಯದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಟೋಕನ್ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಕೌಂಟರ್‌ಗಳನ್ನು ಸ್ಥಾಪಿಸಿದ್ದ ತಿರುಪತಿಯ ವಿಷ್ಣು ನಿವಾಸಂ ದೇವಾಲಯದ ಬಳಿಕಾಲ್ತುಳಿತ ಸಂಭವಿಸಿದೆ.

೧೦ ದಿನಗಳ ಈ ಕಾರ್ಯಕ್ರಮದಲ್ಲಿ, ಭಕ್ತರಿಗೆ ಉತ್ತರ ದ್ವಾರದ ಮೂಲಕ ದೇವರ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗುರುವಾರ ಬೆಳಿಗ್ಗೆ ಟೋಕನ್ ವಿತರಣೆ ಆರಂಭವಾಗಬೇಕಿದ್ದರೂ ಬುಧವಾರ ಸಂಜೆಯಿಂದಲೇ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಕೌಂಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ತೊಂದರೆಗೀಡಾದ ಮಹಿಳೆಗೆ ಸಹಾಯ ಮಾಡಲು ಒಂದು ಗೇಟ್ ತೆರೆದಾಗ, ಭಕ್ತರು ಮುಂದೆ ದೌಡಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಹಬ್ಬದ ಮೊದಲ ಮೂರು ದಿನಗಳವರೆಗೆ (ಜನವರಿ ೧೦-೧೨) ೧.೨೦ ಲಕ್ಷ ಟೋಕನ್‌ಗಳ ವಿತರಣೆಗೆ ಟಿಟಿಡಿ ವ್ಯವಸ್ಥೆ ಮಾಡಿತ್ತು. ತಿರುಪತಿಯ ೯೪ ಸ್ಥಳಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು.

RELATED ARTICLES
- Advertisment -
Google search engine

Most Popular