Monday, April 21, 2025
Google search engine

Homeರಾಜ್ಯಸುದ್ದಿಜಾಲಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ಡಿ. ೧ರಿಂದ ನೋಂದಣಿ ಪ್ರಾರಂಭ: ಸಿ.ಆರ್. ರಮ್ಯ

ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ಡಿ. ೧ರಿಂದ ನೋಂದಣಿ ಪ್ರಾರಂಭ: ಸಿ.ಆರ್. ರಮ್ಯ

ರಾಮನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿ. ೧ ರಿಂದ ೩೧ ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಿ.ಆರ್. ರಮ್ಯ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರಿಂದ ರಾಗಿ ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‌ಗಳನ್ನು ನೇಮಿಸುವಂತೆ ಹಾಗೂ ರೈತರಿಂದ ಪ್ರತಿ ಎಕರೆಗೆ ೧೦ ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಗಿ ಖರೀದಿ ಸಂದರ್ಭದಲ್ಲಿ ಈ ವರ್ಷ ಮೊದಲ ಬಾರಿಗೆ ಬಯೋ ಮೆಟ್ರಿಕ್ ಅಳವಡಿಕೆ ಮಾಡಲಾಗುತ್ತಿದೆ. ರೈತರಿಗೆ ನೋಂದಣಿ ಸಂದರ್ಭದಲ್ಲಿ ಎಫ್.ಐ.ಡಿ ಸಮಸ್ಯೆಗಳಾದರೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು. ರೈತರು ರಾಗಿ ನೋಂದಣಿ ಮಾಡಿಸುವ ಮುನ್ನ ತಮ್ಮ ದಾಖಲಾತಿಗಳನ್ನು ಖಾತರಿಪಡಿಸಿಕೊಂಡು ನಂತರ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ರೈತರಿಂದ ರಾಗಿ ಖರೀದಿಸುವ ಸಂದರ್ಭದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು. ರೈತರು ರಾಗಿ ಮಾರಾಟ ಮಾಡಲು ಯಾವುದೇ ಮಧ್ಯವರ್ತಿಗಳ ಸಹಾಯ ಪಡೆಯದೇ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು, ರಾಗಿ ಮಾರಾಟ ಮಾಡುವಂತೆ ತಿಳಿಸಿದರು.

ಖರೀದಿ ಕೇಂದ್ರ: ಕೆ.ಎಫ್.ಸಿ.ಎಸ್.ಸಿ ಚನ್ನಪಟ್ಟಣ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ. ರಸ್ತೆ, ಚನ್ನಪಟ್ಟಣ, ಕೆ.ಎಫ್.ಸಿ.ಎಸ್.ಸಿ ಕನಕಪುರ ಸಗಟು ಮಳಿಗೆ, ಮೆಳೆಕೋಟೆ, ರಾಮನಗರ ರಸ್ತೆ, ಕನಕಪುರ, ಕೆ.ಎಫ್.ಸಿ.ಎಸ್.ಸಿ ಮಾಗಡಿ ಸಗಟು ಮಳಿಗೆ, ಗುಡೇಮಾರನಹಳ್ಳಿ ರಸ್ತೆ, ಮಾಗಡಿ ಹಾಗೂ ಕೆ.ಎಫ್.ಸಿ.ಎಸ್.ಸಿ. ರಾಮನಗರ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ. ರಸ್ತೆ, ರಾಮನಗರ ಸೇರಿದಂತೆ ಒಟ್ಟು ೪ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular