ಪಿರಿಯಾಪಟ್ಟಣ: ತಂಬಾಕು ರೈತರ ಹಿತ ಕಾಪಾಡಲು ಶ್ರಮಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರ ಕಾರ್ಯಕ್ಕೆ ತಂಬಾಕು ಮಂಡಳಿ ಉಪಾಧ್ಯಕ್ಷರಾದ ಮಾಜಿ ಶಾಸಕ ಎಚ್.ಸಿ ಬಸವರಾಜು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೆ.25 ರಂದು ಪ್ರಾರಂಭವಾದ ಪ್ರಸಕ್ತ ಸಾಲಿನ ತಂಬಾಕು ಹರಾಜು ಮಾರುಕಟ್ಟೆ ಸಂದರ್ಭ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ, ಹರಾಜು ಮಾರುಕಟ್ಟೆ ಸಂಖ್ಯೆ 5 ರಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಖರೀದಿದಾರರಿಗೆ ಉತ್ತಮ ಬೆಲೆ ನೀಡಿ ರೈತರ ಹಿತ ಕಾಪಾಡುವಂತೆ ಸಂಸದ ಪ್ರತಾಪ್ ಸಿಂಹ ಸೂಚಿಸಿದ್ದಾರೆ ಎಂದರು.

ಬೆಂಗಳೂರಿನಲ್ಲಿ ನಡೆದ ವಿಶ್ವ ಕಾಫಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸುಮಾರು 17 ಸಾವಿರ ಅನದಿಕೃತ ತಂಬಾಕು ಬೆಳೆಗಾರರಿಗೂ ಶೀಘ್ರ ದಂಡ ರಹಿತವಾಗಿ ತಂಬಾಕು ಮಾರಾಟ ಮಾಡಲು ಅವಕಾಶ ಕಲ್ಪಿಸಲು ಮನವಿ ಮಾಡಿದ್ದು ಸಂಸದರ ಮನವಿಗೆ ಕೇಂದ್ರ ಸಚಿವರು ತಕ್ಷಣ ಆದೇಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ರಾಜ್ಯದ ಎಲ್ಲಾ ಅನಧಿಕೃತ ತಂಬಾಕು ಬೆಳೆಗಾರರನ್ನು ಅಧಿಕೃತಗೊಳಿಸಲು ವಾಣಿಜ್ಯ ಸಚಿವರು ಹಾಗೂ ತಂಬಾಕು ಮಂಡಳಿಯನ್ನು ಸಂಸದರು ಒತ್ತಾಯಿಸಿದ್ದು ತಂಬಾಕು ರೈತರ ಮೇಲೆ ಸಂಸದ ಪ್ರತಾಪ್ ಸಿಂಹ ಅವರಿಗಿರುವ ಕಾಳಜಿ ತಾಲೂಕಿನ ಎಲ್ಲಾ ತಂಬಾಕು ಬೆಳೆಗಾರರು ಹಾಗೂ ಸದಸ್ಯರಾದ ವಿಕ್ರಮ್ ರಾಜ್ ಮತ್ತು ಹೆಚ್.ಆರ್ ದಿನೇಶ್ ಪರ ಸಂಸದರಿಗೆ ಧನ್ಯವಾದ ತಿಳಿಸಿದ್ದಾರೆ.