ರಾಮನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ ೨೩-ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇಂದು (ಏ. ೩ರಂದು) ೧೩ ನಾಮಪತ್ರ ಸ್ವೀಕರಿಸಲಾಗಿದೆ.
೨೩-ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇಂದು ಕರುನಾಡು ಪಕ್ಷದ ಅಭ್ಯರ್ಥಿ ಸುರೇಶ್ ಎಸ್ ೧ ನಾಮಪತ್ರ, ಅಖಿಲ ಭಾರತ್ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ಹೆಚ್. ರಾಜಣ್ಣ ೧ ನಾಮಪತ್ರ, ನವಭಾರತ್ ಸೇನಾ ಪಕ್ಷದ ಅಭ್ಯರ್ಥಿ ಎನ್. ವಸಂತ್ ರಾವ್ ಜಗತಾಪ್ ೧ ನಾಮಪತ್ರ, ಸ್ವತಂತ್ರ ಅಭ್ಯರ್ಥಿ ರಾಜೇಂದ್ರ ಟಿ. ೧ ನಾಮಪತ್ರ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ಕುಮಾರ್ ಎಲ್ ೧ ನಾಮಪತ್ರ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮನಮೋಹನ್ ರಾಜ್ ಕೆ.ಎನ್ ೧ ನಾಮಪತ್ರ, ಬಹುಜನ್ ಭಾರತ ಪಕ್ಷದ ಅಭ್ಯರ್ಥಿ ಮಂಜುನಾಥ ಸಿಎನ್ ೧ ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಮಹಮದ್ ಮುಸದಿಕ್ ಪಾಷ ೧ ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಮಂಜುನಾಥ್ ಸಿ ೧ ನಾಮಪತ್ರ, ಬಹುಜನ್ ಸಮಾಜ ಪಕ್ಷದ ಅಭ್ಯರ್ಥಿ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ೧ ನಾಮಪತ್ರ, ಕಂಟ್ರಿಸಿಟಿಜನ್ ಪಕ್ಷದ ಅಭ್ಯರ್ಥಿ ವಸಿಸ್ಟ್ ಜೆ ೧ ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಮಂಜುನಾಥ್ ಎನ್ ೧ ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಮಂಜುನಾಥ್ ಕೆ. ೧ ನಾಮಪತ್ರ ಸಲ್ಲಿಸಿರುತ್ತಾರೆ. ಮಾರ್ಚ್ ೨೮ ರಿಂದ ಏ. ೩ರ ವರೆಗೆ ೨೬ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.