ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿಯ ಸಂಗಮದಲ್ಲಿ ಇಂದು ನಟ ದಿ.ದ್ವಾರಕೀಶ್ ಅಸ್ತಿ ವಿಸರ್ಜನೆ ಮಾಡಲಾಗುತ್ತದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿಯ ಸಂಗಮ ಸ್ಥಳಕ್ಕೆ ದ್ವಾರಕೀಶ್ ಕುಟುಂಬಸ್ಥರು ಆಗಮಿಸಿದ ಬಳಿಕ ವೈದಿಕ ಅಸ್ತಿ ವಿಸರ್ಜನೆ ಕಾರ್ಯ ನೆರವೇರಲಿದೆ.
ವೈದಿಕ ಪುರೋಹಿತರಿಂದ ಬಾಹ್ಮಣ ಸಂಪ್ರದಾಯದಂತೆ 10 ಗಂಟೆಗೆ ವೈದಿಕ ವಿಧಿ ವಿಧಾನದ ಪೂಜಾ ಕಾರ್ಯ ಪ್ರಾರಂಭವಾಗಲಿದೆ.
ನೆನ್ನೆ ಬೆಂಗಳೂರಿನ ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ನಟ ದ್ವಾರಕೀಶ್ ಅಂತ್ಯಕ್ರಿಯೆ ನೆರವರಿತ್ತು.