ಮಡಿಕೇರಿ : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್4 ಮಕ್ಕಂದೂರು, ಎಫ್11 ಗಾಳಿಬೀಡು ಮತ್ತು ಎಫ್10 ಕುಂಡಮೇಸ್ತ್ರಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಇಂದು ಆ. 19 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಕರ್ಣಂಗೇರಿ, ಕೆ.ನಿಡುಗಣೆ, ಮಕ್ಕಂದೂರು, ಕಾಲೂರು, ದೇವಸ್ತೂರು, ಗಾಳಿಬೀಡು, ಆರ್‍ಟಿಒ ಕಚೇರಿ, ಕೂಟುಹೊಳೆ, ಮುಕ್ಕೋಡ್ಲು, ಆವಂಡಿ, ಹಮ್ಮಿಯಾಲ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.