ಮಂಡ್ಯ: ಇಂದು ಅಭಿಷೇಕ್ ಅಂಬರೀಶ್- ಅವಿವಾ ಬೀಗರ ಔತಣಕೂಟವನ್ನು ಅದ್ದೂರಿಯಾಗಿ ಆಚರಿಸಲು ಕುಟುಂಬ ನಿರ್ಧರಿಸಿದ್ದು, ಅಭಿಮಾನಿಗಳಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ ಕುಟುಂಬ ತಯಾರಿ ನಡೆಸಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ.
ದಿವಂಗತ ಅಂಬರೀಶ್ ಕುಟುಂಬ ಸುಮಾರು 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಲ್ಲಿದೆ.
ವಿಶಾಲ ಜಾಗದಲ್ಲಿ ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ರಾತ್ರಿಯಿಂದ ಬೀಗರ ಊಟದ ಬಾಡೂಟ ಸಿದ್ದವಾಗುತ್ತಿದ್ದು, ಇಂದು ಬೆಳಿಗ್ಗೆ 11:30ರಿಂದ ಔತಣ ಕೂಟ ಆರಂಭವಾಗಲಿದೆ.
ಮಂಡ್ಯ ಶೈಲಿಯಲ್ಲಿ ಬಾಡೂಟ
ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿ ಕಾರ್ಯ ನಡೆಯುತ್ತಿದ್ದು, ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬರ್, ಕಬಾಬ್, ಮೊಟ್ಟೆ, ರೈಸ್, ತಿಳಿಸಾಂಬಾರ್,,ಬಾದುಶಾ, ಪಾಯಸ, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಮೆನುವಿನಲ್ಲಿದೆ.