ಮೈಸೂರು: ಇಂದು ಸ್ವಚ್ಛತಾ ಅಭಿಯಾನ ಅಂಗವಾಗಿ ಮೈಸೂರಿನ ವಿಜಯನಗರ ಒಂದನೇ ಹಂತದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮತ್ತು ಲಯನ್ಸ್ ಕ್ಲಬ್ ಮೈಸೂರು ಮಿಡಿ ಟೌನ್ ಜೊತೆಗೂಡಿ ವಿಜಯನಗರದ ಒಂದನೇ ಹಂತದ ಒಂದನೇ ಮುಖ್ಯರಸ್ತೆ ಎರಡನೇ ಮುಖ್ಯ ರಸ್ತೆ ಹಾಗೂ ಕಾಳಿದಾಸ ರಸ್ತೆಯ ಆಯ್ದ ಭಾಗಗಳಲ್ಲಿ ಕಸ ಕಡ್ಡಿ ಹಾಗೂ ಇನ್ನಿತರೆ ಕಸಗಳನ್ನು ತೆಗೆಯುವುದರ ಮೂಲಕ ಸ್ವಚ್ಛತಾ ದಿವಸವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಉದಯ್ ಕುಮಾರ್ ನಗರಪಾಲಿಕೆ ಸದಸ್ಯ ಸುಬ್ಬಯ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ ರವಿ ಹಾಗೂ ಗೋಪಾಲಸ್ವಾಮಿ ಇನ್ನಿತರರು ಹಾಜರಿದ್ದರು.
