ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ ೩೫೩ ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿಂದು ಗುರು ರಾಯರ ಮಧ್ಯಾರಾಧನೆ ಸಂಭ್ರಮ ಇಂದಿಗೆ ೩೫೩ ವರ್ಷ ತುಂಬಿದೆ. ಇಂದು ಬುಧವಾರ ಮಠದಲ್ಲಿ ಪೂಜಾ ಕೈಂಕರ್ಯಗಳು ಭರದಿಂದ ಜರುಗುತ್ತಿದೆ.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನೇತೃತ್ವದಲ್ಲಿ ಪೂಜೆ, ವೃಂದಾವನಕ್ಕೆ ಮಠದ ಶ್ರೀಗಳಿಂದ ವಿಶೇಷ ಮಹಾಪಂಚಾಮೃತ ಅಭಿಷೇಕ ನಡೆಯಲಿದೆ. ಆರಾಧನಾ ಮಹೋತ್ಸವಕ್ಕೆ ಸ್ವರ್ಣ ಕವಚ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.
ಮಠದ ಪ್ರಾಕಾರದಲ್ಲಿ ಗಜ, ರಜತ, ಚಿನ್ನದ ರಥೋತ್ಸವ ನಡೆಯಲಿದೆ.ಇನ್ನು ನಿನ್ನೆ ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನಿನ್ನೆ ಸಂಜೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವ ದಿನವನ್ನು ರಾಯರ ಪೂರ್ವಾಧನೆಯನ್ನಾಗಿ ಮಾಡಲಾಗುತ್ತಿದೆ. ಈ ಹಿನ್ನೆಲೆ ದೇಶ, ವಿದೇಶ, ಅಂತಾರಾಜ್ಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.