Friday, April 4, 2025
Google search engine

HomeUncategorizedರಾಷ್ಟ್ರೀಯಮಹಾ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಇಂದು ಮೋದಿ ಪುಣ್ಯ ಸ್ನಾನ

ಮಹಾ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಇಂದು ಮೋದಿ ಪುಣ್ಯ ಸ್ನಾನ

ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿಯಾಗಲಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.

ಅಲ್ಲದೆ ಈ ಭೇಟಿಯ ವೇಳೆ ಕುಂಭಮೇಳದ ಪ್ರದೇಶದಲ್ಲಿ ಭಕ್ತಾದಿಗಳಿಗೆ ಕಲ್ಪಿಸಲಾದ ವ್ಯವಸ್ಥೆಗಳ ಪರಿಶೀಲನೆ ಮತ್ತು ಸಾಧು ಸಂತರೊಡನೆ ಸಂವಾದ ನಡೆಸಲಿದ್ದಾರೆ.

ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10:05ಕ್ಕೆ ಬಂದಿಳಿಯುವ ಮೋದಿ, ಅಲ್ಲಿಂದ ಅರೈಲ್‌ ಘಾಟ್‌ಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ನಂತರ ಅಲ್ಲಿಂದ ಬೋಟ್‌ ಮೂಲಕ ತ್ರಿವೇಣಿ ಸಂಗಮ ತಲುಪಲಿದ್ದಾರೆ. ನಂತರ 11 ಗಂಟೆಯಿಂದ 11:30ರ ಅವಧಿಯಲ್ಲಿ ಸಂಗಮ ಘಾಟ್‌ನಲ್ಲಿ ಪುಣ್ಯ ಸ್ನಾನ ಕೈಗೊಳ್ಳಲಿದ್ದಾರೆ.

ದೆಹಲಿ ವಿಧಾನಸಭೆಗೆ ಮತದಾನ ನಡೆಯುವ ವೇಳೆಯೇ ಪ್ರಧಾನಿ ಕುಂಭಮೇಳಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

RELATED ARTICLES
- Advertisment -
Google search engine

Most Popular