ನವದೆಹಲಿ: ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದು(ಜೂನ್ 30) ಕೊನೆ ದಿನವಾಗಿದೆ.
ಒಂದು ವೇಳೆ ಕೊನೆಯ ದಿನಾಂಕದಲ್ಲೂ ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇದು ಸಂಭವಿಸಿದಲ್ಲಿ, ಪ್ಯಾನ್ ಕಾರ್ಡ್ ಅನ್ನ ಭವಿಷ್ಯದಲ್ಲಿ ಎಲ್ಲಿಯೂ ಬಳಸಲು ಸಾಧ್ಯವಾಗುವುದಿಲ್ಲ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ. ಅಮಾನ್ಯವಾದ PAN ಕಾರ್ಡ್ ನಿಂದಾಗಿ ಈ ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. ದೋಷಪೂರಿತ ಆದಾಯವನ್ನು ತಿದ್ದುಪಡಿ ಮಾಡಲಾಗುವುದಿಲ್ಲ. ಪ್ಯಾನ್ ಕಾರ್ಡ್ ಇಲ್ಲದಿರುವುದರಿಂದ ತೆರಿಗೆ ಭಾರವಾಗಿರುತ್ತದೆ. ಹಾಗಾಗಿ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಉತ್ತಮ.