ನವದೆಹಲಿ: ವಿಶ್ವ ಪ್ರಾಣಿಗಳ ದಿನವನ್ನು ಪ್ರತಿ ವರ್ಷ ಅ.೦೪ರಂದು ಆಚರಿಸಲಾಗುವುದು. ಈ ದಿನ ಪ್ರಾಣಿಗಳಿಗೆ ಮೀಸಲಾಗಿದೆ. ಪ್ರಾಣಿಗಳ ಹಕ್ಕು, ಅವರ ರಕ್ಷಣೆ ದೃಷ್ಟಿಕೋನದಿಂದ ವಿಶ್ವ ಪ್ರಾಣಿಗಳ ದಿನವನ್ನು ಆಚರಿಸಲಾಗುವುದು. ವಿಶ್ವ ಪ್ರಾಣಿಗಳ ದಿನ ಎಂಬುದು ಒಂದು ಚಳವಳಿಯಾಗಿದ್ದು, ಇದಕ್ಕೆ ಅನ್ನೆಕಾ ಸ್ವೆನ್ಸಕಾ, ಬ್ರೈನ್ ಬ್ಲೆಸೆಡ್ ಮತ್ತು ಮೆಲನಿಯಾ ಸಿ ಸೇರಿದಂತೆ ಅನೇಕ ಸೆಲಿಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಅನುಸಾರ ಮೊದಲ ಬಾರಿಗೆ ಮಾ ೨೪, ೧೯೨೫ರಂದು ಜರ್ಮನಿಯ ಸೈನಾಲಜಿಸ್ಟ್ ಹೆನ್ರಿಕ್ ಝಿಮ್ಮರ್‌ಮ್ಯಾನ್ ಅವರ ಶಿಫಾರಸಿನ ಮೇರೆಗೆ ಬರ್ಲಿನ್ ನಲ್ಲಿ ವಿಶ್ವ ಪ್ರಾಣಿಗಳ ದಿನವನ್ನು ಆಚರಿಸಲಾಯಿತು. ಪ್ರಾಣಿಗಳ ಯೋಗಕ್ಷೇಮ ಮತ್ತು ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಯಿತು. ಈ ವರ್ಷ ಅಂದರೆ ೨೦೨೩ರ ವಿಶ್ವ ಪ್ರಾಣಿಗಳ ದಿನವನ್ನು ಜಗತ್ತಿನಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪ್ರಸ್ತುತ ಪ್ರಾಣಿಗಳ ರಕ್ಷಣೆ ದೊಡ್ಡ ವಿಚಾರವಾಗಿದೆ. ಕಳೆದ ೫೦-೬೦ ವರ್ಷಗಳ ಹಿಂದೆ ಪ್ರಾಣಿಗಳ ಸ್ಥಿತಿ ಶೋಚನೀಯವಾಗಿದೆ. ೧೯೭೦ ರಿಂದ ೨೦೨೩ರವರೆಗೆ ಅನೇಕ ಪ್ರಾಣಿ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಮನುಷ್ಯರು ಕೂಡ ಪ್ರಾಣಿಗಳ ವಿಚಾರದಲ್ಲಿ ಅತ್ಯಂತ ಕ್ರೂರವಾಗಿದ್ದಾರೆ.
ಇದನ್ನು ಗಮನದಲ್ಲಿರಿಸಿಕೊಂಡು ಪಶುಸಂಗೋಪನಾ ಇಲಾಖೆ ಪ್ರತಿ ವರ್ಷ ಹದಿನೈದು ದಿನ ಪ್ರಾಣಿಗಳ ಯೋಗಕ್ಷೇಮವನ್ನು ಆಯೋಜಿಸುತ್ತದೆ. ಪ್ರಾಣಿಗಳ ಸರ್ಜರಿ ಕ್ಯಾಂಪ್ ಅನ್ನು ಆಯೋಜಿಸಲಾಗುವುದು. ಈ ಕ್ಯಾಂಪ್‌ನಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ಮತ್ತು ಪ್ರಾಣಿಗಳ ಯೋಗಕ್ಷೇಮದ ಕುರಿತು ಅರಿವು ಮೂಡಿಸಲಾಗುವುದು.
ಇದಕ್ಕಾಗಿಯೇ ಭಾರತದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ಕಾಯ್ದೆ ೧೯೬೬ ಅನ್ನು ಜಾರಿಗೆ ತಂದು ಪ್ರಾಣಿಗಳ ರಕ್ಷಣೆಗೆ ಪಣತೊಡಲಾಗಿದೆ. ಆದರೆ, ಈ ಕಾಯ್ದೆ ಜಾರಿಗೆ ತಂದರೂ ಭಾರತದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ನಿಂತಿಲ್ಲ. ಇದನ್ನು ನಿಲ್ಲಿಸಬೇಕು ಎಂದರೆ ಜನರು ಜಾಗೃತಿ ಹೊಂದಬೇಕಿದೆ.