Friday, April 11, 2025
Google search engine

Homeರಾಜ್ಯಸುದ್ದಿಜಾಲಇಂದು ವಿಶ್ವದ ಅತೀ ದೊಡ್ಡ ಕಚೇರಿ ಸೂರತ್’ನ ‘ಡೈಮಂಡ್ ಬೋರ್ಸ್’ ಉದ್ಘಾಟಿಸಲಿರುವ ಮೋದಿ

ಇಂದು ವಿಶ್ವದ ಅತೀ ದೊಡ್ಡ ಕಚೇರಿ ಸೂರತ್’ನ ‘ಡೈಮಂಡ್ ಬೋರ್ಸ್’ ಉದ್ಘಾಟಿಸಲಿರುವ ಮೋದಿ

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತೀ ದೊಡ್ಡ ಕಚೇರಿ ಸೂರತ್ ನ ‘ಡೈಮಂಡ್ ಬೋರ್ಸ್’ ಅನ್ನು ಉದ್ಘಾಟಿಸಲಿದ್ದಾರೆ.

ಮೋದಿ ಅವರು ಇಂದು ಗುಜರಾತ್‌ನ ಸೂರತ್ ಮತ್ತು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸೂರತ್ ವಿಮಾನ ನಿಲ್ದಾಣದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಟರ್ಮಿನಲ್ ಕಟ್ಟಡವು 1200 ದೇಶೀಯ ಪ್ರಯಾಣಿಕರು ಮತ್ತು 600 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪೀಕ್ ಅವರ್‌ನಲ್ಲಿ ನಿರ್ವಹಿಸಲು ಸುಸಜ್ಜಿತವಾಗಿದೆ. ಪೀಕ್ ಅವರ್ ಸಾಮರ್ಥ್ಯವನ್ನು 3000 ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

ಇದಾದ ಬಳಿಕ ಮೋದಿ ವಾರಣಾಸಿಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 3:30ಕ್ಕೆ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5:15 ರ ಸುಮಾರಿಗೆ ಅವರು ನಮೋ ಘಾಟ್‌ನಲ್ಲಿ ಕಾಶಿ ತಮಿಳು ಸಂಗಮಂ 2023 ಅನ್ನು ಉದ್ಘಾಟಿಸಲಿದ್ದಾರೆ.

RELATED ARTICLES
- Advertisment -
Google search engine

Most Popular