Tuesday, April 15, 2025
Google search engine

Homeರಾಜಕೀಯಈಗಿನ ರಾಜಕಾರಣಿಗಳು ಭ್ರಷ್ಟರು:ವಾಟಾಳ್ ನಾಗರಾಜ್

ಈಗಿನ ರಾಜಕಾರಣಿಗಳು ಭ್ರಷ್ಟರು:ವಾಟಾಳ್ ನಾಗರಾಜ್

ಮಂಡ್ಯ:ಹಿಂದಿನ ರಾಜಕಾರಣಿಗಳು ಪ್ರಾಮಾಣಿಕವಾಗಿದ್ದರು ,ಆದರೆ ಇವಾಗಿನ ರಾಜಕಾರಣಿಗಳಲ್ಲಿ ಬರಿ ಭ್ರಷ್ಟಾಚಾರವೇ ತುಂಬಿದೆ ಎಂದು ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕಾವೇರಿ ಹೋರಾಟದಲ್ಲಿ ಮೊದಲಿನಿಂದಲೂ ಜಿ ಮಾದೇಗೌಡರು ಜೊತೆಗಿದ್ದರು ಇದೀಗ ಸುನಂದ ಜಯರಾಮ್ ಅವರು ಕಾವೇರಿ ಹೋರಾಟ ನಡೆಸುತ್ತಿದ್ದಾರೆ. ಚೌಡಯ್ಯ, ಆತ್ಮಾನಂದ ಅವರು ಸಹ ಹಿರಿಯ ಹೋರಾಟಗಾರರು ಶಂಕರೇಗೌಡರು ಸಹ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು .ಚಡ್ಡಿ ಚಳುವಳಿ ಮಾಡುತ್ತಿದ್ದರು ಮಂಡ್ಯದಲ್ಲಿ ಪ್ರಾಮಾಣಿಕ ಜನ ನಂಬಿಕೆಗೆ ಬಹಳ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೆ ಈ ನಾಡು ಬೆಳೆಯಲ್ಲಿ ಹೊಸ ಶಕ್ತಿಯನ್ನು ಕೊಟ್ಟಿದೆ. ರೈತರನ್ನು ನೋಯಿಸಬಾರದು ಮಂಡ್ಯದ ರೈತರು ಪ್ರಾಮಾಣಿಕವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರೈತರು ಏನೇ ಹೋರಾಟ ಮಾಡಿದ್ರು ನಮ್ಮ ಬೆಂಬಲ ಅವರಿಗಿದೆ ನಿಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟು ಕರ್ನಾಟಕ ಬಂದ್ ಮಾಡಲಾಗಿತ್ತು. ಕಾವೇರಿ ನಮಗೆ ಸಂಬಂಧ ಇಲ್ಲ ಅನ್ನಬಾರದು ನಾವೆಲ್ಲ ಒಂದೇ ರೀತಿಯ ಹೋರಾಟ ಮಾಡಬೇಕು.

ಸರ್ಕಾರ ನೀರು ಬಿಡುತ್ತಲೇ ಇದೆ, ನೀರು ನಿಲ್ಲಿಸಿಲ್ಲ ಯಾರು ಏನು ಮಾಡ್ಕೋತಾರೆ? ಅಂತ ಬರಿ ಕತೆ ಬಿಡ್ತಾರೆ ಸರ್ಕಾರದಿಟ್ಟ ನಿಲುವು ತೆಗೆದುಕೊಳ್ಳಬೇಕು. ಸಿದ್ದರಾಮಯ್ಯನವರಿಗೆ ಇಂತಹ ಸಂದರ್ಭ ನಿಮ್ಮ ಜೀವನದಲ್ಲಿ ಸಿಗಲ್ಲ ಯಾರ ಮಾತನ್ನು ಕೇಳದೆ ನೀರು ಬಿಡಲ್ಲ ಅಂತ ಹೇಳಿ ಎಂದು ಹೇಳಿದರು. ಅಧಿಕಾರ ಹೋಗುತ್ತಾ ಹೋಗಲಿ ಮುಖ್ಯಮಂತ್ರಿ ಸ್ಥಾನದಿಂದ ನಿಮ್ಮನ್ನು ತೆಗೆಯಲು ಸಾಧ್ಯವಿಲ್ಲ. ರಾಜ್ಯಪಾಲ ಆಳ್ವಿಕೆ ತರುತ್ತಾರ? ತರಲಿ ಸರ್ಕಾರ ತೆಗೆದು ನೀರು ಬಿಡುತ್ತಾರೆ . ನಿಮಗೆ ಅದ್ಭುತ ಚಿಂತನೆ ಇದೆ ನೀವೇ ಕೊನೆಯ ಕೊಂಡಿ, ಮುಂದಿನ ದಿನಗಳಲ್ಲಿ ಈ ರಾಜ್ಯ ರೌಡಿಗಳ ಕೈಗೆ ಹೋಗುತ್ತೆ ರೌಡಿಗಳು ಚುನಾವಣೆಗೆ ನಿಲ್ಲುತ್ತಾರೆ ಅವರ ಗುರುತು ಲಾಂಗ್ ಆಗಿದ್ದು, ರೌಡಿಗಳೆ ಮುಖ್ಯಮಂತ್ರಿಗಳು ಆಗ್ತಾರೆ ಅಧಿಕಾರಿಗಳನ್ನ ಬಳಕೆ ಮಾಡಿಕೊಂಡು ಅಟ್ಟಹಾಸ ನಡೆಸುತ್ತಾರೆ. ಈ ವಿಷಯವಾಗಿ ಇಪ್ಪತ್ತು ವರ್ಷದ ಹಿಂದೆ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೆ ಆದ್ದರಿಂದ ಕರ್ನಾಟಕ ಉಳಿಸಿ ರೈತರಿಗೆ ಬೆಂಬಲ ಕೊಡಿ ನಾನು ರೈತರಿಗೆ ಬೆಂಬಲ ಕೊಡ್ತೀನಿ. ಕಾವೇರಿ ಅಂತ್ಯ ಹೋರಾಟ ನಡೆಯಲೇಬೇಕು ಎಂದು ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಹೇಳಿದರು.


RELATED ARTICLES
- Advertisment -
Google search engine

Most Popular