ಮೈಸೂರು: ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿಯ ಆಶ್ರಯದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ನಡೆಯುವಶಿವಾನುಭವ ದಾಸೋಹ ಮಾಲಿಕೆಯ ೩೧೬ನೆಯ ಕಾರ್ಯಕ್ರಮವನ್ನು ಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ನಾಳೆ ದಿ.೩೧ ಸಂಜೆ ೬.೦೦ಕ್ಕೆ ಮೈಸೂರು ಸಾತಗಳ್ಳಿ ೨ನೇ ಹಂತದ ವಿಟಿಯು ಪ್ರಾದೇಶಿಕ ಕೇಂದ್ರದ ಹಿಂಭಾಗಅಂಗನವಾಡಿ ಪಕ್ಕ ನಂ. ೫೧೩೧ರಲ್ಲಿ ಏರ್ಪಡಿಸಲಾಗಿದೆ.
ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಶ್ರೀ ನಗರ್ಲೆ ಶಿವಕುಮಾರರವರು ‘ಜಗದಜಂಗಮ ಪರಮಪೂಜ್ಯರಾಜೇಂದ್ರ ಶ್ರೀಗಳು’ ವಿಷಯಕುರಿತುಉಪನ್ಯಾಸ ನೀಡಲಿದ್ದಾರೆ.ಶ್ರೀಯುತರು ಎಂಎ, ಜಿಡಿಸಿ ಪದವೀಧರರು.ಬೆಂಗಳೂರು ಜೆಎಸ್‌ಎಸ್ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದರು.ಶರಣ ಸಾಹಿತ್ಯ, ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವಇವರು ಹಲವಾರು ಮೌಲಿಕ ಕೃತಿಗಳನ್ನು ಹಾಗೂ ಲೇಖನಗಳನ್ನು ರಚಿಸಿದ್ದಾರೆ.
ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಬಸವರಾಜುರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಾಮರಾಜನಗರ ತಾಲ್ಲೂಕು ಆಲ್ದೂರು ಗ್ರಾಮದವರು.ಮೈಸೂರು ವಸಂತಮಹಲ್‌ನಲ್ಲಿ ಶಿಕ್ಷಕರ ತರಬೇತಿ ಪಡೆದು ೧೯೮೫ರಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು.ಟಿ. ನರಸೀಪುರ ಮತ್ತು ಮೈಸೂರಿನಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಪ್ರಸ್ತುತ ಬೋಗಾದಿ ಬಸವ ಬಳಗ ಸೇವಾ ಟ್ರಸ್ಟ್‌ನಅಧ್ಯಕ್ಷರಾಗಿ ಮತ್ತು ಸಾತಗಳ್ಳಿ ೨ನೇ ಹಂತದ ನಾಗರಿಕಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾಗಿದ್ದಾರೆ.
ಬೋಗಾದಿಯ ಬಸವ ಬಳಗ ಸೇವಾ ಟ್ರಸ್ಟ್‌ನವರು ಕಾರ್ಯಕ್ರಮದ ಸೇವಾರ್ಥದಾರರಾಗಿರುತ್ತಾರೆ. ಡಿ.ಎಂ. ಮಂಜುಳ ಮತ್ತು ಎಲ್.ಬಿ. ಚನ್ನಬಸಪ್ಪ ವಚನ ಗಾಯನ ನಡೆಸಿಕೊಡಲಿದ್ದಾರೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದೆ.