ಮೈಸೂರು: ಭುವನ್‌ರಾಜ್ ಫೌಂಡೇಷನ್ ಹಾಗೂ ಚೇತನ್‌ರಾಜ್ ಎನ್.ಅಭಿಮಾನಿಗಳ ಬಳಗದ ವತಿಯಿಂದ ನಾಳೆ ಫೆ.೯ರಿಂದ ೧೧ರವರೆಗೆ ಜೆಪಿ ನಗರ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಜೆ.ಪಿ.ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಹ ಕಾರ್ಯದರ್ಶಿ ಗೋಪಾಲ್ ತಿಳಿಸಿದರು.
ನಾಳೆ ಫೆ.೯ರಂದು ಬೆಳಗ್ಗೆ ೯.೩೦ಕ್ಕೆ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಶ್ರೀವತ್ಸ, ಜಿ.ಟಿ. ದೇವೇಗೌಡ ಇನ್ನಿತರರು ಅತಿಥಿಗಳಾಗಿರುವರು. ಮೊದಲ ಬಹುಮಾನವಾಗಿ ಒಂದು ಲಕ್ಷ, ಎರಡನೇ ಬಹುಮಾನವಾಗಿ ೫೦ ಸಾವಿರ ರೂ., ನೀಡಲಾಗುವುದು ಎಂದು ಹೇಳಿದರು