ಮೈಸೂರು: ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಕಾಣ ಸಿಗುವುದೇ ಅಪರೂಪ. ಕಂಡರದ್ದೂ ಅವರ ಖುಷಿಗೆ ಪಾರವೇ ಇರುವುದಿಲ್ಲ.
ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅರಣ್ಯದ ಕಬಿನಿಯಲ್ಲಿ ಸಫಾರಿಗೆ ಮಾಡುತ್ತಿದ್ದ ಪ್ರವಾಸಿಗರಿಗೆ ಆರು ಹುಲಿಗಳು ಕಾಣಿಸಿಕೊಂಡಿವೆ.
ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಫಾರಿಗೆ ತೆರಳಿದ್ದ ಪ್ರಸನ್ನ ಎಂಬುವವರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ.