ವರದಿ: ಸತೀಶ್ ಆರಾಧ್ಯ
ಮೈಸೂರು: ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾ ಆವರಣದಲ್ಲಿನ ಉಮಾ ಮಹೇಶ್ವರ ಮತ್ತು ಪಂಚಾಚಾರ್ಯ ದೇವಾಲಯದಲ್ಲಿ ಹುಣ್ಣಿಮೆ ಪೂಜೆ ಸಾಂಪ್ರದಾಯಿಕವಾಗಿ ನಡೆಯಿತು.
ಪುರೋಹಿತರಾದ ಜಯಶಂಕರ್ ಆರಾಧ್ಯ(ಗುರು) ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ಹಲವು ಬಗೆಯ ಅಭಿಷೇಕ ಕುಂಕುಮಾರ್ಚನೆ ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು .ಬಳಿಕ ಸಂಜೆ ಹೋಮ ನಡೆಸಿ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಯಿತು.

ಬೆಳಗಿನ ಪೂಜೆಯನ್ನು ಕರತಾಳು ಗ್ರಾಮದ ಹಾಲಿವಾಸ ಮೈಸೂರಿನ ಚೈತ್ರ ನಾಗೇಂದ್ರ ಆರಾಧ್ಯ ಕುಟುಂಬದವರು ಹಾಗೂ ಸಂಜೆ ಪೂಜೆಯನ್ನು ಕೆಲ್ಲೂರು ಗ್ರಾಮದ ಹಾಲಿವಾಸ ಮೈಸೂರಿನ ಪಾರ್ವತಿ ವಸಂತ್ ಕುಮಾರ್ ಕುಟುಂಬದವರು ನಡೆಸಿಕೊಟ್ಟರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಆರಾಧ್ಯ ಮಹಾಸಭಾ ಉಪಾಧ್ಯಕ್ಷರಾದ ವರಲಕ್ಷ್ಮಿ ಸ್ವೀಟ್ಸ್ ಕುಮಾರ್ ಆರಾಧ್ಯ, ಕಾರ್ಯದರ್ಶಿ ಮಹೇಶ್ವರ ಆರಾಧ್ಯ, ಖಜಾಂಚಿ ಶಶಿಶೇಖರ್ ಆರಾಧ್ಯ, ನಿರ್ದೇಶಕರಾದ ಮಲೆಯೂರು ರಾಜಣ್ಣ, ಹರಿನಹಳ್ಳಿ ಅಶೋಕ್, ನಾಗರತ್ನಮ್ಮ, ತಾಯೂರು ಮಂಜು ಸೇರಿದಂತೆ ಆರಾಧ್ಯ ಬಂಧುಗಳು ಇದ್ದರು.