ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತಾತನಹಳ್ಳಿ ಗ್ರಾಮದಲ್ಲಿ ಅಖಿಲ ನಾಮಧಾರಿ ಗೌಡ ಸಮಾಜ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗಳನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
ಗೌರಿ ಗಣೇಶ ಹಬ್ಬದ ದಿನ ಗ್ರಾಮದ ಅಖಿಲ ನಾಮಧಾರಿ ಗೌಡ ಸಮಾಜ ಭವನದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜಿಸಿ ವಿಸರ್ಜನೆ ದಿನ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಿ ಬಳಿಕ ಅಲಂಕೃತ ಟ್ರ್ಯಾಕ್ಟರ್ ನಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿ ಮನೆಗಳ ಬಳಿ ಪೂಜೆ ಸಲ್ಲಿಸಿ ಗ್ರಾಮದ ದೇವರ ಕೆರೆಯಲ್ಲಿ ವಿಸರ್ಜಿಸಿ ಪ್ರಸಾದ ವಿತರಿಸಲಾಯಿತು.
ಈ ವೇಳೆ ಅಖಿಲ ನಾಮಧಾರಿ ಗೌಡ ಸಮಾಜದ ತಾಲೂಕು ಅಧ್ಯಕ್ಷ ಲಕ್ಷ್ಮಣೆಗೌಡ, ಗ್ರಾಮದ ಸಮಿತಿ ಅಧ್ಯಕ್ಷರಾದ
ಎಸ್.ಎಲ್ ರವಿಕುಮಾರ್, ಕಾರ್ಯದರ್ಶಿ ಮಾದು, ಮುಖಂಡರಾದ ಶಿವರಾಮೇಗೌಡ, ಮೋಹನ್, ಅನಿಲ್, ರುದ್ರೇಗೌಡ, ರಶೀಕ, ಅಶೋಕ್ ಮತ್ತು ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು, ವಿಸರ್ಜನಾ ಮೆರವಣಿಗೆ ವೇಳೆ ಗ್ರಾಮದ ಮುಸ್ಲಿಂ ಸಮುದಾಯದವರು ತಂಪು ಪಾನೀಯ ನೀಡಿ ಸೌಹಾರ್ದತೆ ಮೆರೆದಿದ್ದು ವಿಶೇಷವಾಗಿತ್ತು, ಯುವಕರು ಯುವತಿಯರು ಮಹಿಳೆಯರು ಸೇರಿ ಡಿಜೆ ಸದ್ದಿಗೆ ನೃತ್ಯ ಮಾಡಿ ಗಮನ ಸೆಳೆದರು.