’ಅತಿವೇಗ ತಿಥಿಬೇಗ’ ಎಂಬ ಜಾಗೃತಿ ಬರಹವನ್ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಸದ್ದಿಲ್ಲದೇ ಸಂಚಾರಿ ನಿಯಮ ಪಾಲಿಸಿ ಎಂಬ ಅರಿವನ್ನು ಮೂಡಿಸುತ್ತಿರುವ ಇವರ ಹೆಸರು ಕೃಷ್ಣ
ಇಂದು ಚಾಮುಂಡಿ ಬೆಟ್ಟದ ಊಟದ ಹಾಲ್ ನಲ್ಲಿ ನನ್ನ ಎದುರಿನ ಸಾಲಿನಲ್ಲಿ ಕುಳಿತು ಊಟ ಮಾಡುತ್ತಿದ್ದ ಇವರ ಕೈ ಮೇಲಿನ ಬರಹ ಬಹಳ ಆಕರ್ಷಕ ಹಾಗೂ ಅರ್ಥಪೂರ್ಣವಾಗಿ ಕಂಡಿತು.
ಇತ್ತೀಚಿನ ಯುವಕ ಯುವತಿಯರು ಚಿತ್ರ ವಿಚಿತ್ರವಾಗಿ ಹಾಕಿಸಿಕೊಳ್ಳುವ ಹಚ್ಚೆಗಳ ನಡುವೆ ಇದೊಂಥರಾ ವಿಶೇಷವಾಗಿ ಕಂಡಿತು,ಊಟದ ನಂತರ ಅವರನ್ನು ಈ ಬಗ್ಗೆ ಕೇಳಿದಾಗ ಎಲ್ಲರೂ ತಮ್ಮ ಸಂಸಾರದ ಸಲುವಾಗಿಯಾದರು ಸಂಚಾರಿ ನಿಯಮ ಪಾಲಿಸಲಿ ನಿಮಗಾಗಿ ಜೀವಗಳು ಕಾಯುತ್ತಿವೆ ಎಂಬ ಅರಿವಿರಲಿ ಎಂಬುದಷ್ಟೇ ನನ್ನ ಕಳಕಳಿ ಎಂದರು.
ನಿರುದ್ಯೋಗಿ ಆಗಿರುವ ಕೃಷ್ಣ ಜಾತ್ರೆ ಮುಗಿಯುವವರಗೆ ಕಸ ಗುಡಿಸುವ ಕೆಲಸಕ್ಕೆ ಬೆಟ್ಟಕ್ಕೆ ಬಂದಿದ್ದಾರೆ
ಅವರ ಈ ಹಚ್ಚೆಯ ಮೇಲ್ಭಾಗದಲ್ಲಿ ಸ್ವಲ್ಪ ಅಳಿಸಿರುವ ಹಚ್ಚೆಯೊಂದು ಕಾಣಿಸುತ್ತದೆ ಅದರಲ್ಲಿ ಪ್ರೀತಿಯೇ ಮೋಸ ಎಂದಿದ್ದು ಇದು ನೊಂದಿರುವ ಜೀವ ಎಂದರ್ಥವಾದರೂ ಅವರ ಸಾಮಾಜಿಕ ಕಳಕಳಿಯ ಮುಂದೆ ಉಳಿದದ್ದೆಲ್ಲವೂ ಗೌಣ.