Monday, April 21, 2025
Google search engine

Homeರಾಜ್ಯಸಂಚಾರ ನಿಯಮ‌ ಉಲ್ಲಂಘನೆ:  ದಂಡ ಪಾವತಿಗೆ ಕ್ಯೂ ಆರ್ ಕೋಡ್ ಸಹಿತ ನೋಟಿಸ್

ಸಂಚಾರ ನಿಯಮ‌ ಉಲ್ಲಂಘನೆ:  ದಂಡ ಪಾವತಿಗೆ ಕ್ಯೂ ಆರ್ ಕೋಡ್ ಸಹಿತ ನೋಟಿಸ್

ಬೆಂಗಳೂರು: ಸಂಪರ್ಕ ರಹಿತ ನಿಯಮ ಜಾರಿಯಡಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ದಂಡ ಪಾವತಿಗೆ ನೋಟಿಸ್ ಕಳುಹಿಸಲು ನಗರ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ನೋಟಿಸ್ ​​ನಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಲಾಗಿದೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇಂದಿನಿಂದ ಕ್ಯೂ ಆರ್ ಕೋಡ್ ಒಳಗೊಂಡಿರುವ ನೋಟಿಸ್ ಕಳುಹಿಸಲಾಗುತ್ತಿದೆ. ಆಟೊಮೇಷನ್ ಸೆಂಟರ್​​ನಿಂದ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅಂಚೆ ಮೂಲಕ ಸವಾರರ ಮನೆ ಬಾಗಿಲಿಗೆ ತಲುಪಲಿದೆ.

ನಿಯಮ ಉಲ್ಲಂಘನಾ ದಿನಾಂಕ, ಸಮಯ, ಯಾವ ರೀತಿ ಸಂಚಾರ ಉಲ್ಲಂಘನೆ ಹಾಗೂ ದಂಡದ ಮೊತ್ತದ ಜೊತೆಗೆ ನೋಟಿಸ್ ಬಲಭಾಗದಲ್ಲಿ ಕ್ಯೂ ಆರ್ ಕೋಡ್ ನಮೂದಿಸಲಾಗಿದೆ. ಸವಾರರು ಸ್ಕ್ಯಾನ್ ಮಾಡಿ, ತಾನು ಉಲ್ಲಂಘನೆ ಮಾಡಿರುವ ಬಗ್ಗೆ ವಿಡಿಯೋ ಹಾಗೂ ಫೋಟೊ ವೀಕ್ಷಿಸಬಹುದಾಗಿದೆ.

ದಂಡ ಪಾವತಿಸಲು ಆನ್​​ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ. 2021 ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಲಭ್ಯವಿರಲಿವೆ. ಈಗಾಗಲೇ 133 ಮಾಲೀಕರಿಗೆ ಈ ರೀತಿಯ ನೋಟಿಸ್ ಕಳುಹಿಸಿರುವುದಾಗಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular