Monday, April 21, 2025
Google search engine

Homeಅಪರಾಧಪತ್ನಿ, ಮಗಳ ದುರಂತ ಸಾವು, ಜೈಲು ಸೇರಿದ ಮಗ: ಖಿನ್ನತೆಯಿಂದ ಪತಿ ಸಾವು

ಪತ್ನಿ, ಮಗಳ ದುರಂತ ಸಾವು, ಜೈಲು ಸೇರಿದ ಮಗ: ಖಿನ್ನತೆಯಿಂದ ಪತಿ ಸಾವು

ಹುಣಸೂರು; ಪತ್ನಿ, ಪುತ್ರಿಯ ದಾರುಣ ಸಾವು, ಮಗ ಜೈಲು ಸೇರಿದ್ದರಿಂದಾಗಿ ಖಿನ್ನತೆಗೊಳಗಾಗಿದ್ದ ತಂದೆ ಸಹ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯ ಸತೀಶ್(೫೫) ಸಾವನ್ನಪ್ಪಿದವರು.

2024 ರ ಜನವರಿ 24ರಂದು ಸತೀಶ್‌ರ ಪುತ್ರ ನಿತೀಶ್ ತನ್ನ ತಂಗಿ ಧನುಶ್ರೀ ಅನ್ಯ ಕೋಮಿನ ಯುವಕನ ಜೊತೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದದನ್ನು ಕಂಡು ತಾಯಿ ಅನಿತಾ, ತಂಗಿ ಧನುಶ್ರೀಯನ್ನು ಬೈಕಿನಲ್ಲಿ ಗ್ರಾಮಕ್ಕೆ ಸಮೀಪದ ಮರೂರು ಕೆರೆಯ ಬಳಿ ಕರೆದೊಯ್ದು, ತಂಗಿಯನ್ನು ಕೆರೆಗೆ ತಳ್ಳಿದ್ದಾನೆ ನೀರಿನಲ್ಲಿ ಮುಳುಗುತ್ತಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ ಸಹ ಕೆರೆಗೆ ಹಾರವಾಗಿದ್ದರು. ಈ ಸಂಬಂಧ ನಿತೀಶ್ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತು. ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.

ಅಂದಿನಿಂದ ಒಬ್ಬಂಟಿಯಾಗಿದ್ದ ಸತೀಶ್ ಖಿನ್ನತೆಗೊಳಗಾಗಿ ಒಬ್ಬೊಂಟಿಯಾಗಿದ್ದರು. ಮಂಗಳವಾರ ಮನೆಯಲ್ಲೇ ಸಾವನ್ನಪ್ಪಿದ್ದು, ಸ್ವಗ್ರಾಮದಲ್ಲಿ ಮೃತ ಸತೀಶ್‌ನ ಅಂತ್ಯಕ್ರಿಯೆ ನಡೆಯಿತು.

ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ಕುಟುಂಬ ನಿರ್ವಹಣೆ ಮಾಡಬೇಕಿದ್ದ ನಿತೀಶ್ ಸೆರೆವಾಸ ಅನುಭವಿಸುತ್ತಿದ್ದಾನೆ.

RELATED ARTICLES
- Advertisment -
Google search engine

Most Popular