Saturday, April 12, 2025
Google search engine

Homeರಾಜ್ಯಕಲ್ಲು ಉರುಳಿ ಬಿದ್ದು, ಟನಲ್ ನಲ್ಲೇ ಸಿಕ್ಕಿಬಿದ್ದ ರೈಲು: ಪ್ರಯಾಣಿಕರು ಪಾರು

ಕಲ್ಲು ಉರುಳಿ ಬಿದ್ದು, ಟನಲ್ ನಲ್ಲೇ ಸಿಕ್ಕಿಬಿದ್ದ ರೈಲು: ಪ್ರಯಾಣಿಕರು ಪಾರು

ಕಲಬುರಗಿ: ಕಮಲಾಪುರ ತಾಲೂಕಿನ ಮರಗುತ್ತಿ ಬಳಿಯಿರುವ ಟನಲ್ ನಲ್ಲಿ ಮಳೆಯಿಂದಾಗಿ ದೊಡ್ಡ ಕಲ್ಲು ಬಿದ್ದಿರುವುದರಿಂದ ಕಲಬುರಗಿ- ಬೀದರ್ ರೈಲು ಟನಲ್ ನಲ್ಲಿ ಸಿಕ್ಕಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ.

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿ ಟನಲ್ ನಲ್ಲೇ ರೈಲು ನಿಂತಿದ್ದು, ಪ್ರಯಾಣಿಕರು ಆತಂಕದಲ್ಲಿದ್ದಾರೆ.

ಈ ಕುರಿತು ಮಾಹಿತಿ ನೀಡಲು ರೈಲ್ವೆ ಅಧಿಕಾರಿಗಳ ಸಂಪರ್ಕ ಸಾಧ್ಯವಾಗಿಲ್ಲ. ಜೀವಕ್ಕೆ ಅಪಾಯವೇನು ಇಲ್ಲ. ಕಳೆದ ರಾತ್ರಿ  ಮಳೆಯಾದ ಹಿನ್ನೆಲೆ ಟನಲ್ ಒಳಗೆ ಹಸಿಯುಂಟಾಗಿ ಕಲ್ಲು ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ.

ಬೆಳಗ್ಗೆ ಕಲಬುರಗಿಯಿಂದ ಬೀದರ್ ಗೆ  ಹೊರಟ ರೈಲು ಇದಾಗಿದ್ದು, ಟನಲ್ ಒಳಗೆ ಸಿಲುಕಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular