Wednesday, April 9, 2025
Google search engine

Homeರಾಜ್ಯಶಿಕ್ಷಕರ ಅರ್ಹತಾ ಪರೀಕ್ಷೆಗೆ ತರಬೇತಿ ಕಾರ್ಯಗಾರ

ಶಿಕ್ಷಕರ ಅರ್ಹತಾ ಪರೀಕ್ಷೆಗೆ ತರಬೇತಿ ಕಾರ್ಯಗಾರ

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಅಗಾಧ : ಚರಂತಿಮಠ

ಬಾಗಲಕೋಟೆ : ಭವ್ಯ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ಆಧುನಿಕ ವಿಷಯಗಳೊಂದಿಗೆ ಶಿಕ್ಷಕರು ನವಿಕರಣಗೊಂಡು ವಿದ್ಯಾರ್ಥಿಗಳ ಸ್ವಾಭಿಮಾನದ ಜೀವನ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮಾಜಿ ಶಾಸಕರು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಬಾಗಲಕೋಟೆಯ ಪ್ರತಿಷ್ಠಿತ ಬಿ.ವ್ಹಿ.ವ್ಹಿ.ಸಂಘದ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ ಹಾಗೂ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಬಾಗಲಕೋಟೆ ಇವರ ಸಹಯೋಗದಲ್ಲಿ ಬಿ.ಇಡಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ತರಬೇತಿ ಕಾರ್ಯಗಾರವನ್ನು ಸಸಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮುಂದಿನ ಪೀಳಿಗೆ ಎದುರಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಜ್ಞಾನ ಮತ್ತು ಸಾಮರ್ಥ್ಯವನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಕರು ಆಧುನಿಕ ವಿಷಯಗಳೊಂದಿಗೆ  ನವಿಕರಣಗೊಳ್ಳುತ್ತಿರಬೇಕು.ವಿದ್ಯಾರ್ಥಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅವರ ಜೀವನ ರೂಪಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಬಿ.ವ್ಹಿ.ವ್ಹಿ.ಸಂಘದ ಬಿ.ಹೆಚ್.ಆರ್.ಡಿ.ಗೌರವ ನಿರ್ದೇಶಕರಾದ ಎಸ್.ಆರ್.ಮನಹಳ್ಳಿ ಶಿಕ್ಷಕರಾಗುವವರಿಗೆ ಶಿಕ್ಷಕ್ಷರ ಅರ್ಹತಾ ಪರೀಕ್ಷೆ ಬಹಳ ಮುಖ್ಯವಾಗುತ್ತದೆ.ಬೋಧನೆಯ ಕಲಿಕಾ ಪದ್ದತಿಗಳು, ಮಾತೃ ಭಾಷೆಯ ಪ್ರಭುದ್ದತೆ, ಸಂಪರ್ಕ ಭಾಷೆಯ ಜ್ಞಾನ, ಮತ್ತು ವಿಷಯ ವಸ್ತು ಗೊತ್ತಿರಬೇಕು. ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ವರ್ತನೆಯಲ್ಲಿ ಪರಿವರ್ತನೆ ತರುವುದು ಶಿಕ್ಷಕರ ಕರ್ತವ್ಯ ಕೂಡಾ ಆಗಿದೆ ಎಂದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿಜಯಲಕ್ಷ್ಮೀ ಹೊಸಕೇರಿ ಸ್ವಾಗತಿಸಿದರು.ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು.ಪ್ರಾಧ್ಯಾಪಕಿ ಡಾ.ರಾಜೇಶ್ವರಿ ತೆಗ್ಗಿ ವಂದಿಸಿದರು. ಶಿಕ್ಷಕರ ಅರ್ಹತಾ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ೧೦೦ ಕ್ಕೂ ಹೆಚ್ಚು ಪ್ರಶಿಕ್ಷಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular