Wednesday, April 16, 2025
Google search engine

Homeಸ್ಥಳೀಯಆರೋಗ್ಯ ತಪಾಸಣೆ ಮತ್ತು ಸ್ವಚ್ಛತೆ ಕುರಿತು ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ

ಆರೋಗ್ಯ ತಪಾಸಣೆ ಮತ್ತು ಸ್ವಚ್ಛತೆ ಕುರಿತು ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ

ಮೈಸೂರಿನ ಖಜಾನೆ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕರಾದ ಪ್ರೊ. ಎಲ್. ಶ್ರೀನಿವಾಸ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ, ಆಶ್ರಮಶಾಲೆಗಳ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮತ್ತು ಸ್ವಚ್ಛತೆ ಕುರಿತು ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಯೂನಿಸೆಫ್ ರವರ ಸಹಯೋಗದೊಂದಿಗೆ ನಡೆಸಲು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್, ಯುನಿಸೆಫ್‌ನ ಪ್ರಾದೇಶಿಕ ನಿರ್ದೇಶಕರಾದ ಡಾ|| ರವೀಶ್‌ಗಣಿ, ಜೆ.ಎಸ್.ಎಸ್. ಡೆಂಟಲ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ|| ಇಂದಿರಾ, ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಬಸವರಾಜು, ನಾರಾಯಣಸ್ವಾಮಿ ಅರುಣ್‌ಪ್ರಭು ಹಾಜರಿದ್ದರು.

RELATED ARTICLES
- Advertisment -
Google search engine

Most Popular