Wednesday, August 20, 2025
Google search engine

Homeಸ್ಥಳೀಯರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ತಾಲ್ಲೂಕು ಮಟ್ಟದ ಮಾಸ್ಟರ್‌ ತರಬೇತಿ ದಾರರಿಗೆ ತರಬೇತಿ ಕಾರ್ಯಾಗಾರ

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ತಾಲ್ಲೂಕು ಮಟ್ಟದ ಮಾಸ್ಟರ್‌ ತರಬೇತಿ ದಾರರಿಗೆ ತರಬೇತಿ ಕಾರ್ಯಾಗಾರ

ಮೈಸೂರು : ಸರ್ಕಾರ ಬುಡಕಟ್ಟುಜನರಿಗೆ ಅನೇಕ ಸವಲತ್ತುಗಳನ್ನು ನೀಡಿದ್ದರೂ ಸಹ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳದೆ ನಿರೀಕ್ಷಿತ ಪ್ರಮಾಣದಲ್ಲಿಅಭಿವೃದ್ಧಿಆಗಿಲ್ಲಎಂದುಜಿಲ್ಲಾ ಪಂಚಾಯತ್‌ನ ಮುಖ್ಯಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ತಿಳಿಸಿದರು.

ಮೈಸೂರಿನಕರ್ನಾಟಕರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿಕರ್ಮಯೋಗಿಅಭಿಯಾನದಡಿತಾಲ್ಲೂಕು ಮಟ್ಟದ ಮಾಸ್ಟರ್‌ತರಬೇತಿದಾರರಿಗೆ ಹಮ್ಮಿಕೊಂಡಿದ್ದ ೨ ದಿನಗಳ ತರಭೇತಿಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಅವರು ಪ್ರವೃತಿ ನಿರೀಕ್ಷೆಗೂ ಮೀರಿ ವರ್ತಿಸುತ್ತಿದೆಯಾವಾಗಏನಾಗುತ್ತದೋ ಹೇಳಲು ಆಗುವುದಿಲ್ಲ ಅಭಿವೃದ್ಧಿಎಂದರೆ ಅಂಕಿಅಂಶಗಳಲ್ಲ. ಬಜೆಟ್‌ನಗಾತ್ರ ಹೆಚ್ಚಾದಂತೆಅಭಿವೃದ್ಧಿಯೂ ಆಗಬೇಕು. ಅನುಧಾನ ಮುಖ್ಯವಲ್ಲ ನಮ್ಮ ನಡವಳಿಕೆ ಹೊಂದಾಣಿಕೆ ಮುಖ್ಯಎಲ್ಲಾಇಲಾಖೆಯವರು ಪರಿಸ್ಪರ ಹೊಂದಾಣಿಕೆ ಮಾಡಿಕೊಂಡುಕೇಂದ್ರ ಮತ್ತುರಾಜ್ಯ ಸರ್ಕಾರದ ಅನುಧಾನಗಳನ್ನು ಸದ್ಭಳಕೆ ಮಾಡಿಕೊಂಡು ಬುಡಕಟ್ಟುಜನರಅಭಿವೃದ್ಧಿಗೆ ಶ್ರಮಿಸಬೇಕುಎಂದರು.

ರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯಉಪನಿರ್ದೇಶಕಿಬಿ.ಎಸ್. ಪ್ರಭಾರವರು ಮಾತನಾಡಿ ನಿಮ್ಮ ಇಲಾಖೆಗಳಲ್ಲಿ ಬುಡಕಟ್ಟು ಸಮುದಾಯದ ಏಳಿಗೆಗೆ ಏನೇನು ಅನುಕೂಲ ಮಾಡಿಕೊಡಬಹುದುಟಿ.ಎಸ್.ಪಿ. ಯೋಜನೆಯಲ್ಲಿ ಏನೇನು ಕಾರ್ಯಕ್ರಮಗಳಿವೆ ಎಲ್ಲವನ್ನು ಬುಡಕಟ್ಟು ಸಮುದಾಯದಜನರಿಗೆ ತಲುಪಿಸಿ ಅವರ ಏಳಿಗೆಗೆ ಶ್ರಮಿಸುವುದರಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯವಾಗಿದೆಎಂದರು.

ಪರಿಶಿಷ್ಟವರ್ಗಗಳ ಕಲ್ಯಾಣಇಲಾಖೆಯಜಿಲ್ಲಾಅಧಿಕಾರಿ ಎಂ.ಕೆ. ಮಲ್ಲೇಶ್ ಮಾತನಾಡಿ ಈ ಅಭಿಯಾನದಲ್ಲಿಎಲ್ಲಾರೀತಿಯ ಅಧಿಕಾರಿಗಳು ಪರಿಚಯವಾಗುತ್ತಾರೆ. ಎಲ್ಲಾತರಬೇತಿಗೂ ನೀವೇ ಬನ್ನಿರಿ ಮುಂದಿನ ದಿನದಲ್ಲಿ ೬೪ ಹಾಡಿಗಳಲ್ಲಿ ತರಬೇತಿ ನೀಡಬೇಕಾಗುತ್ತದೆ. ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಬುಡಕಟ್ಟುಜನರಿಗೆಕೊಡುಗೆ ನೀಡಬೇಕುಎಂದರು.

ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗ್ರಾಮೀಣಅಭಿವೃದ್ಧಿ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಕುಡಿಯುವ ನೀರು ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಮತ್ತುಕುಟುಂಬ ಕಲ್ಯಾಣಇಲಾಖೆಯತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿಕೇಂದ್ರ ಬುಡಕಟ್ಟು ಸಂಸ್ಥೆಯ ಸಂಶೋಧನಾಧಿಕಾರಿ ಸುನುಮಿ ಚಾಂಗ್ಮಿ, ಅರುಣ್‌ಪ್ರಭು, ಜಿ.ಆರ್. ಮಹೇಶ್, ಪದ್ಮಾವತಿ ಬೆಲ್ಲಾಳ ಚಂದ್ರಶೇಖರಅಕ್ಕಮಹಾದೇವಿ, ರಘುನಾಥ್, ಮಹೇಂದ್ರ, ಅಭಿಷೇಕ್, ಲೆಕ್ಕಾಧಿಕಾರಿಬಿ.ಆರ್. ಭವ್ಯಾ, ಕೋಮಲಾ ಹಾಜರಿದ್ದರು.

RELATED ARTICLES
- Advertisment -
Google search engine

Most Popular