Sunday, April 13, 2025
Google search engine

Homeಅಪರಾಧಕಾನೂನು11 ಮಂದಿ ಡಿವೈಎಸ್ ಪಿ ಗಳ ವರ್ಗಾವಣೆ

11 ಮಂದಿ ಡಿವೈಎಸ್ ಪಿ ಗಳ ವರ್ಗಾವಣೆ

ಬೆಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿ ಸಭೆಯ ನಿರ್ಣಯದಂತೆ ಡಿವೈಎಸ್ ಪಿ (ಸಿವಿಲ್) ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಬೆಳಗಾವಿಯ ಡಿಸಿಆರ್ ಇ ಜ್ಯೋತಿಬಾ ನಿಕ್ಕಂ ಅವರನ್ನು ಬೆಳಗಾವಿ ನಗರದ ಸಂಚಾರ ಉಪ ವಿಭಾಗಕ್ಕೆ, ಸ್ಥಳ ನಿರೀಕ್ಷಣೆಯಲ್ಲಿದ್ದ ಮಂಜುನಾಥ್ ಜಿ ಅವರನ್ನು ತುಮಕೂರು ಜಿಲ್ಲೆ ಮಧುಗಿರಿ ಉಪ ವಿಭಾಗಕ್ಕೆ, ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂರಜ್ ಪಿ.ಎ ಅವರನ್ನು ಮಡಿಕೇರಿ ಉಪ ವಿಭಾಗಕ್ಕೆ, ಡಿ.ಎನ್ ಸನಾದಿ ಅವರನ್ನು ಬೀದರ್ ಜಿಲ್ಲೆಯ ಸಿಇಎನ್ ಗೆ ಕುಮಾರಸ್ವಾಮಿ ಅವರನ್ನು ಡಿಸಿಆರ್ ಇಗೆ, ಸಂಜೀವ ಕುಮಾರ್ ತಿರ್ಲುಕ ಅವರನ್ನು ಶಿವಮೊಗ್ಗ ಬಿ ಉಪ ವಿಭಾಗಕ್ಕೆ, ದೀಪಕ್ ಸಿ ವಿ ಅವರನ್ನು ಬೆಂಗಳೂರು ನಗರದ ಬ್ಯಾಟರಾಯನ ಪುರ ಉಪ ವಿಭಾಗಕ್ಕೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಉಪ ವಿಭಾಗದ ಗಜಾನನ ವಾಮನ ಸುತಾರ ಅವರನ್ನು ಬಾಗಲಕೋಟೆ ಉಪ ವಿಭಾಗಕ್ಕೆ, ಕಲಬುರಗಿ ನಾಗೇನಹಳ್ಳಿ ಪಿಟಿಸಿ ಶರಣ ಬಸವೇಶ್ವರ ಭೀಮರಾವ್ ಬಿ ಅವರನ್ನು ದಾವಣಗೆರೆ ಉಪ ವಿಭಾಗಕ್ಕೆ, ಆಂತರಿಕ ಭದ್ರತಾ ವಿಭಾಗದ ಆನಂದ್ ಸಿ.ಎಸ್ ಅವರನ್ನು ಬೆಂಗಳೂರು ನಗರ ಉಪ ವಿಭಾಗ ಜೆ.ಸಿ.ನಗರಕ್ಕೆ, ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಡಿ ಕುಲಕರ್ಣಿ ಅವರನ್ನು ಉತ್ತರ ಕನ್ನಡ ಜಿಲ್ಲೆ ಕುಂದಾಪುರ ಉಪ ವಿಭಾಗ ವರ್ಗಾವಣೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular