Friday, April 18, 2025
Google search engine

Homeರಾಜ್ಯ25 ಇನ್ಸ್‌ಪೆಕ್ಟರ್‌, 34 ಡಿವೈಎಸ್‌ಪಿಗಳ ವರ್ಗಾವಣೆ

25 ಇನ್ಸ್‌ಪೆಕ್ಟರ್‌, 34 ಡಿವೈಎಸ್‌ಪಿಗಳ ವರ್ಗಾವಣೆ

ಬೆಂಗಳೂರು: ರಾಜ್ಯಸರ್ಕಾರ ಸಶಸ್ತ್ರ ಮೀಸಲು ಪಡೆಯ 34 ಡಿವೈಎಸ್ಪಿಗಳು ಹಾಗೂ 25 ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಭದ್ರತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಸೇರಿದಂತೆ ಹಲವರನ್ನು ಸ್ಥಾನಪಲ್ಲಟ ಮಾಡಲಾಗಿದೆ.

ಮಾಜಿ ಪ್ರಧಾನಿಗಳು ಮತ್ತು ಕುಟುಂಬದ ಭದ್ರತೆ ವಿಭಾಗದಲ್ಲಿ ಡಿವೈಎಸ್ಪಿಯಾಗಿದ್ದ ಕೃಷ್ಣಕುಮಾರ್ ಕೆ. ಅವರನ್ನು ಯಲಹಂಕದ ಪಿಡಿಎಂಸ್‍ಗೆ ವರ್ಗಾವಣೆ ಮಾಡಲಾಗಿದೆ. ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಎ.ಪಿ.ಸಂತೋಷ್ ಅವರನ್ನು ಸಿಎಆರ್ ಕೇಂದ್ರಕಚೇರಿಗೆ ನಿಯೋಜಿಸಲಾಗಿದೆ. ಇನ್ಸ್‍ಪೆಕ್ಟರ್ ಶಿವಕುಮಾರ್ ಅವರನ್ನು ಮಾಜಿ ಪ್ರಧಾನಿಗಳ ಭದ್ರತೆಗೆ ನಿಯೋಜಿಸಲಾಗಿದೆ.

ಉಳಿದಂತೆ ಡಿವೈಎಸ್ಪಿಗಳಾದ ರಾಜೇಶ್ ಎಸ್.ಎನ್., ಹರೀಶ್ ಎಚ್.ಎಂ., ಟಿ.ವೆಂಕಟೇಶ್, ಗಿರೀಶ್ ಬಿ.ಆರ್., ನಿಂಗರೆಡ್ಡಿ ಬಿ.ಪಾಟೀಲ್ ಅವರನ್ನು ಬೆಂಗಳೂರು ನಗರ ಸಿಎಆರ್ ಕೇಂದ್ರ ವಿಭಾಗಕ್ಕೆ ಶಂಕರ್ ಆರ್., ಸನಾಉಲ್ಲಾಖಾನ್‍ರನ್ನು ಬೆಂಗಳೂರಿನ ಉತ್ತರದ ಸಿಎಆರ್‍ಗೆ, ಶ್ರೀನಿವಾಸ್ ಜೆ., ಪಾಂಡುರಂಗ.ವಿ.ಭಂಡಾರಿ ಅವರನ್ನು ಸಿಎಆರ್ ದಕ್ಷಿಣ ವಿಭಾಗಕ್ಕೆ, ದೇವಪ್ಪ .ವೈ.ಬಿ., ಕೆ.ಬಿ.ಗೌಡ ಅವರನ್ನು ಸಿಎಆರ್ ಪಶ್ಚಿಮ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಕೆ.ಆರ್.ರಘು ಅವರನ್ನು ಕೋಲಾರಕ್ಕೆ, ಮಹೇಶ್ .ಜಿ ಅವರನ್ನು ರಾಮನಗರಕ್ಕೆ ಜಯರಾಂ ಅವರನ್ನು ಬೆಂಗಳೂರಿನ ಡಿಎಆರ್‍ಗೆ ವರ್ಗಾವಣೆ ಮಾಡಲಾಗಿದೆ. ಎಚ್.ವಿ.ವೀರಣ್ಣ, ಅಶೋಕ್ ಕುಮಾರ್ ಎ.ಜೆ. ಅವರನ್ನು ಮೈಸೂರು ನಗರದ ಸಿಎಆರ್‍ಗೆ, ಹೆಚ್.ಬಿ.ಸತೀಶ್ ಅವರನ್ನು ಮೈಸೂರಿನ ಡಿಎಆರ್‍ಗೆ, ಜಿ.ಎನ್.ಕೃಷ್ಣಸ್ವಾಮಿ ಅವರನ್ನು ಹಾಸನಕ್ಕೆ, ಜಿ.ಆರ್.ಸೋಮಣ್ಣ ಅವರನ್ನು ಚಾಮರಾಜನಗರದ ಡಿಎಆರ್‍ಗೆ ವರ್ಗಾವಣೆ ಮಾಡಲಾಗಿದೆ.

ಮುರುಗಪ್ಪ ಅಣ್ಣಾ ಸಾಹೇಬ್ ಉಪಾಸೆ ಅವರನ್ನು ಮಂಗಳೂರಿನ ಸಿಎಆರ್‍ಗೆ, ಟಿ.ಪಿ.ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗಕ್ಕೆ, ಪಿ.ಬಿ.ಪ್ರಕಾಶ್ ಅವರನ್ನು ದಾವಣಗೆರೆಗೆ, ನಿಶಿಮಪ್ಪ ಎನ್.ಹನಕನಹಳ್ಳಿ ಅವರನ್ನು ಹಾವೇರಿಗೆ, ಶಿವಾನಂದ ಚನ್ನಬಸಪ್ಪನವರ್ ಅವರನ್ನು ಧಾರವಾಡಕ್ಕೆ, ವಿದ್ಯಾನಂದ ವಿ.ನಾಯಕ್ ಅವರನ್ನು ಗದಗಕ್ಕೆ, ಶಶಿಧರಯ್ಯ ಅವರನ್ನು ಕೊಪ್ಪಳಕ್ಕೆ, ಪ್ರಮಾನಂದ ಬಿ.ಗೋಡ್ಕೆ ಅವರನ್ನು ರಾಯಚೂರಿಗೆ, ಭರತ್ ಜಿ.ತಳವಾರ್ ಅವರನ್ನು ಯಾದಗಿರಿಗೆ, ಸುನೀಲ್ ಪರಪ್ಪಕೂಡ್ಲಿ ಅವರನ್ನು ಬೀದರ್‍ನ ಡಿಎಆರ್‍ಗೆ ವರ್ಗಾವಣೆ ಮಾಡಲಾಗಿದೆ.
ಶರಣಪ್ಪ ಎಚ್.ಸೂಲಿಬಾವಿ ಅವರನ್ನು ಕಲಬುರ್ಗಿ ಸಿಎಆರ್‍ಗೆ, ನಿಂಗಪ್ಪ .ಎನ್. ಅವರನ್ನು ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ, ಎಚ್.ಎಂ.ಡಿ.ಸರದಾರ್ ಅವರನ್ನು ಚಿತ್ರದುರ್ಗ ಐಮಂಗ್ಲ ಪೊಲೀಸ್ ತರಬೇತಿ ಶಾಲೆಗೆ, ಕುಮಾರ್.ಕೆ. ಅವರನ್ನು ಯಲಹಂಕದ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಸಶಸ್ತ್ರ ಮೀಸಲು ಪಡೆ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ನಯೀಂ ಎಂ., ನವೀನ್.ವೈ.ಕೆ., ವೀರಭದ್ರಯ್ಯ, ಮಂಜುನಾಥ್ ಜಿ.ಡಿ., ರವಿ ಡಿ.ಆರ್., ಶೇಖರ್ ಜಿ.ಎಂ., ಪ್ರದೀಪ್ ಕುಮಾರ್ ಅವರನ್ನು ಬೆಂಗಳೂರು ನಗರದ ಸಿಎಆರ್‍ನ ಕೇಂದ್ರ ದಕ್ಷಿಣ ಹಾಗೂ ಪಶ್ಚಿಮ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ.

ಮಹಲಿಂಗಪ್ಪ ಜಿ. ಜುಮ್ಮನಾಳ್ ಅವರನ್ನು ಕೋಲಾರಕ್ಕೆ, ಎ.ರವಿ ಅವರನ್ನು ರಾಮನಗರಕ್ಕೆ, ರಾಮಕೃಷ್ಣ ಎಚ್.ಕೆ. ಅವರನ್ನು ತುಮಕೂರಿಗೆ, ಗಣೇಶ್ ಎಚ್.ಪಿ. ಅವರನ್ನು ಹಾಸನಕ್ಕೆ, ನಾರಾಯಣ ಪೂಜಾರಿ ಅವರನ್ನು ದಕ್ಷಿಣ ಕನ್ನಡಕ್ಕೆ, ಪ್ರಶಾಂತ್ ಕೆ.ಎಸ್. ಅವರನ್ನು ಶಿವಮೊಗ್ಗಕ್ಕೆ, ಚನ್ನಬಸವ, ಹನುಮಂತ ಅವರನ್ನು ಕಲಬುರ್ಗಿಗೆ, ಲಚ್ಚಪ್ಪ ಅವರನ್ನು ಯಾದಗಿರಿಗೆ, ಶರಣಪ್ಪ ಚಂದವಟೆ ಅವರನ್ನು ಬೀದರ್‍ನ ಡಿಎಆರ್‍ಗೆ ವರ್ಗಾವಣೆ ಮಾಡಲಾಗಿದೆ.

ಕೆ.ಎಂ.ಮೂರ್ತಿ, ಶ್ರೀನಿವಾಸ್.ಇ ಅವರನ್ನು ಮೈಸೂರಿನ ನಗರದ ಸಿಎಆರ್‍ಗೆ ವರ್ಗಾವಣೆ ಮಾಡಿ, ಆನಂದಕುಮಾರ್ ಅವರನ್ನು ಮೈಸೂರು ಅರಮನೆ ಭದ್ರತೆಯಲ್ಲೇ ಮುಂದುವರೆಸಲಾಗಿದೆ. ರಘುರಾಂ ವಿ.ಕಾಮತ್ ಅವರನ್ನು ಮಂಗಳೂರು, ಮಲ್ಲಿಕಾರ್ಜುನ ಎಸ್.ಮರೂಳ್ ಅವರನ್ನು ಹುಬ್ಬಳ್ಳಿ-ಧಾರವಾಡ ಸಿಎಆರ್‍ನಲ್ಲಿ ಮುಂದುವರೆಸಲಾಗಿದೆ.

RELATED ARTICLES
- Advertisment -
Google search engine

Most Popular