ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಹಕಾರ ಸಂಘಗಳನ್ನು ಸದೃಢವಾಗಿ ಕಟ್ಟಲು ಗುಣಮಟ್ಟದ ಹಾಲು ಮಾತ್ರವಲ್ಲದೆ ಪಾರದರ್ಶಕವಾದ ಆಡಳಿತದಿಂದ ಸಾಧ್ಯ ಎಂದು ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್ ಜೆ ರಮೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2023-24ನೇ ಸಾಲಿನಲ್ಲಿ 3.69 ಲಕ್ಷ ರೂಗಳ ಆದಾಯ ಗಳಿಸಿದೆ ಎಂದು ಮಾಹಿತಿ ನೀಡಿದರು.
ದೀಪಾವಳಿ ವೇಳೆಗೆ ಸಂಘದ ಸದಸ್ಯರಿಗೆ ಬೋನಸ್ ವಿತರಣೆ ಮಾಡಲಾಗುವುದು ಹಾಗೂ ಸರ್ಕಾರದಿಂದ ಬರುವ ಪ್ರೋತ್ಸಾಹ ಧನದ ಬಿಡುಗಡೆಯಾದ ತಿಂಗಳಿನ ಮಾಹಿತಿಯನ್ನು ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಂಘದ ಮೇಲ್ವಿಚಾರಕ ನಾಗರಾಜು ಮಾತನಾಡಿ ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಆನ್ ಲೈನ್ ಮೂಲಕ ಪ್ರತಿದಿನ ಸರಬರಾಜು ಮಾಡುವ ಹಾಲಿನ ಪ್ರಮಾಣ ಹಣ ಹಾಗೂ ಸರ್ಕಾರದ ಪ್ರೋತ್ಸಾಹ ಧನದ ವಿವರಗಳು ಸದಸ್ಯರ ಮೊಬೈಲ್ ಸಂಖ್ಯೆಗೆ ನೇರವಾಗಿ ನಿತ್ಯ ಬರಲಿದ್ದು ಮುಂದಿನ ತಿಂಗಳ 1ನೇ ತಾರೀಖಿನಿಂದ ಈ ಸೌಲಭ್ಯ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರ್ವರಾಜು ಮಾಡಿದ ಮೂವರಿಗೆ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜು ನಿರ್ದೇಶಕರಾದ ಸ್ವಾಮಿ, ಬುದ್ದಿಸಾಗರ, ಪರಶುರಾಮ್, ರಂಗೇಗೌಡ, ಯದುಕುಮಾರ, ಭರತ ಲಲಿತ ಪೂರ್ಣಿಮಾ ಪ್ರಸನ್ನ ಸಂಘದ ಸಿಇಒ ಶಿವಶಂಕರ ಪರೀಕ್ಷಕ ಎಚ್.ಎಲ್
ಮಹದೇವ ಸೇರಿದಂತೆ ಮತ್ತಿತರರು ಹಾಜರಿದ್ದರು.