ಗದಗ : ಚಲಿಸುತ್ತಿರೋವಾಗಲೇ ಸಾರಿಗೆ ಬಸ್ ಹಿಂದಿನ ಚಕ್ರ ಬಿಚ್ಚಿಕೊಂಡು ಉರುಳಿಬಿದ್ದ ಘಟನೆ ಗದಗ ತಾಲೂಕಿನ ತಗಡೂರು ಗ್ರಾಮದ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗದಗದಿಂದ ನರಗುಂದದ ಕಡೆ ಹೊರಟಿದ್ದ ಕರ್ನಾಟಕ ಸಾರಿಗೆ ನಿಮಗದ ಬಸ್ ಗದಗ ಡಿಪೋಗೆ ಸೇರಿದ ಬಸ್ ಎಂದು ತಿಳಿದು ಬಂದಿದೆ.
ಬಸ್‌ನಲ್ಲಿ ಸುಮಾರು ೫೦ ಜನ ಪ್ರಯಾಣಿಕರು ಮತ್ತು ಕಾಲೇಜ್ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಬಸ್ ಹಿಂಬದಿ ಚಕ್ರ ಬಿಚ್ಚಿ ಉರುಳಿ ಹೋಗ್ತಿದ್ದಂತೆ ಬಸ್ ನಿಲ್ಲಿಸಿದ ಚಾಲಕ, ಅಬ್ಬ ಬದುಕಿದೆವು ಅಂತ ನಿಟ್ಟುಸಿರು ಬಿಟ್ಟ ಪ್ರಯಾಣಿಕರು.
ಫುಲ್‌ರಷ್‌ನಿಂದಾಗಿ ಬಸ್‌ಗಳ ಒಂದೊಂದೇ ವಸ್ತುಗಳು ಕಳಚಿಬೀಳ್ತಿವೆ, ಮಾರ್ಗಮಧ್ಯದಲ್ಲಿಯೇ ಕೆಲವು ಬಸ್‌ಗಳು ಕೆಟ್ಟು ನಿಲ್ತಿವೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.