Thursday, April 3, 2025
Google search engine

Homeರಾಜ್ಯಮಾ.22ರ ಅಖಂಡ ಕರ್ನಾಟಕ ಬಂದ್ ಗೆ ಸಾರಿಗೆ ಬಸ್ ಗಳ ಬೆಂಬಲ : ಸಚಿವ ರಾಮಲಿಂಗಾರೆಡ್ಡಿ

ಮಾ.22ರ ಅಖಂಡ ಕರ್ನಾಟಕ ಬಂದ್ ಗೆ ಸಾರಿಗೆ ಬಸ್ ಗಳ ಬೆಂಬಲ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಬೆಂಗಳೂರು: ಮಾರ್ಚ್.22ರಂದು ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟವನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್ ನಡೆಸಲಾಗುತ್ತಿದೆ. ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯಾಧ್ಯಂತ ಬಂದ್ ಇರಲಿದ್ದು, ಕರ್ನಾಟಕ ಬಂದ್’ಗೆ ಸರ್ಕಾರಿ ಬಸ್ ಗಳ ಬೆಂಬಲ ನೀಡುವ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗ ರೆಡ್ಡಿ ಅವರು, ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ, ಮರಾಠಿ ಪುಂಡರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಮಾರ್ಚ್.22ರಂದು ಬೆಂಗಳೂರಿನ ಟೌನ್ ಹಾಲ್ ನಿಂದ ಬೃಹತ್ ಮೆರವಣಿಗೆಯ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮಾರ್ಚ್.22ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ರಾಜ್ಯಾಧ್ಯಂತ ಎಲ್ಲವೂ ಬಂದ್ ಆಗಲಿದ್ದಾವೆ. ಕನ್ನಡಿಗರಿಗೆ ಅನ್ಯಾಯ ಖಂಡಿಸಿ ಈ ಬಂದ್ ನಡೆಸಲಾಗುತ್ತಿದೆ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಎಂಇಎಸ್ ನಿಷೇಧ ಮಾಡಬೇಕು. ಕನ್ನಡಿಗರ ಮೇಲಿನ ಅನ್ಯಾಯಕ್ಕೆ ತಕ್ಕ ಪಾಠವನ್ನು ಮರಾಠಿಗರಿಗೆ ಕಲಿಸುವಂತ ಕೆಲಸವನ್ನು ಸರ್ಕಾರ ಮಾಡಬೇಕು. ಹೀಗಾಗಿ ವಾಹನ ಚಾಲಕರು, ಮಾಲೀಕರು, ರಾಜ್ಯದ ಜನರು ಮಾರ್ಚ್.22ರ ಅಖಂಡ ಕರ್ನಾಟಕ ಬಂದ್ ಗೆ ಬೆಂಬಲಿಸಬೇಕು ಎಂಬುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular