ಪಿರಿಯಾಪಟ್ಟಣ: ಕರ್ತವ್ಯದ ಅವಧಿಯಲ್ಲಿ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಸಾರಿಗೆ ಘಟಕದ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ ಎಂದು ವರ್ಗಾವಣೆಗೊಂಡ ಸಾರಿಗೆ ಸಂಚಾರ ನಿರೀಕ್ಷಕ ಶ್ರೀನಿವಾಸ ರೆಡ್ಡಿ ಹೇಳಿದರು.
ಪಟ್ಟಣದ ಸಾರಿಗೆ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಸಂಚಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಬೆಂಗಳೂರು ಮಹಾನಗರ ಸಾರಿಗೆಗೆ ವರ್ಗಾವಣೆಯಾದ ಹಿನ್ನೆಲೆ ಪಿರಿಯಾಪಟ್ಟಣ ಸಾರಿಗೆ ಘಟಕ ಸಿಬ್ಬಂದಿಯಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವರು ಜನಸ್ನೇಹಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಜನಮನ್ನಣೆಗಳಿಸಬಹುದು ಎಂಬುದಕ್ಕೆ ವರ್ಗಾವಣೆ ಸಂದರ್ಭ ಜತೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಪ್ರೀತಿಯ ಅಭಿಮಾನ ಉತ್ತಮ ಉದಾಹರಣೆಯಾಗಿದೆ. ಎಲ್ಲರೂ ತಾವು ಕರ್ತವ್ಯ ನಿರ್ವಹಿಸುವ ಸಂಸ್ಥೆಯ ಮೇಲೆ ಅಭಿಮಾನವಿಟ್ಟು ನಿಷ್ಠೆಯಿಂದ ಇದ್ದರೆ ಅಭಿವೃದ್ಧಿಪಥದಲ್ಲಿ ಸಾಗಬಹುದು ಎಂದು ಹೇಳಿ ಕರ್ತವ್ಯ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಅವರು ಮಾತನಾಡಿ ಶ್ರೀನಿವಾಸ ರೆಡ್ಡಿ ಅವರು ಕರ್ತವ್ಯದ ವೇಳೆ ಚಾಲಕರು ನಿರ್ವಾಹಕರು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಕಚೇರಿಯವರೊಡನೆ ಉತ್ತಮ ಒಡನಾಟ ಇಟ್ಟುಕೊಂಡು ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭ ಸಾರಿಗೆ ಸಂಸ್ಥೆಯ ಸಂಚಾರ ನಿರೀಕ್ಷಕರಾದ ಪ್ರಕಾಶ್, ಪಾರುಪತ್ತೆಗಾರರಾದ ಗೋವಿಂದ್, ಪ್ರಕಾಶ್, ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಕಚೇರಿ ಸಿಬ್ಬಂದಿ ಇದ್ದರು.
