ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಕಲ್ಕಟ್ಟದಲ್ಲಿ ನಡೆದ ಗ್ಯಾಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕದ್ರಿಯ ಸರ್ಕ್ಯೂಟ್ ಹೌಸ್ ನಲ್ಲಿ ಪ್ರೆಸ್ ಮೀಟ್ ನಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ರು.
ಪರಿಹಾರ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪರಿಹಾರ ಒಂದು ಗಂಟೆಯಲ್ಲಿ ನೀಡಬಹುದು. ಅದಕ್ಕೆ ಕಷ್ಟವಿಲ್ಲ.ಇಲ್ಲಿ ಪರಿಹಾರಕ್ಕಿಂತ ಚಿಕಿತ್ಸೆ ಮುಖ್ಯವಾಗಿದೆ. ಚಿಕಿತ್ಸೆಗೆ ವೈದ್ಯರ ಸಹಿತ ವ್ಯವಸ್ಥೆ ಮಾಡಲಾಗಿದೆ. ಮೊದಲು ಆಸ್ಪತ್ರೆಯಲ್ಲಿ ಇರುವವರು ಬದುಕಿ ಬರಬೇಕು. ಹುಬ್ಬಳ್ಳಿ ಯಲ್ಲಿ ನಡೆದ ಘಟನೆಯಲ್ಲಿ ತೊಂದರೆಗೊಳಗಾದದ್ದು ಒಂದೇ ಕುಟುಂಬದವರಲ್ಲ. ಆದ ಕಾರಣ ಪರಿಹಾರ ನೀಡಿದ್ದೇವೆ. ಈ ಹಿಂದೆ ಮದನಿನಗರ, ಹರೇಕಳದಲ್ಲಿ ದುರಂತ ಸಂಭವಿಸಿದಾಗ ಅದೇ ದಿನ ಪರಿಹಾರ ನೀಡಿದ್ದೇವೆ. ಜೀವಕ್ಕಿಂತ ಹಣ ಮುಖ್ಯನಾ ಅಂತಾ ಪ್ರಶ್ನಿಸಿದ್ದಾರೆ.