ಮೈಸೂರು : ವೃಕ್ಷಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಅರಿವು ಮೂಡಿಸುವ ಕೆಲಸ ಜರೂರಾಗಿ ಆಗಬೇಕಿದೆ ಎಂದು ಸ್ವಾಮಿ ವಿವೇಕಾನಂದ ಯೋಗ ರೀಸರ್ಚ್ ಆ್ಯಂಡ್ ಹೋಲಿಸ್ಟಿಕ್ ಹೆಲ್ತ್ ಟ್ರಸ್ಟಿಯ ಸಂಸ್ಥಾಪಕ ಡಾ. ಯೋಗಿ ದೇವರಾಜು ಹೇಳಿದರು.
ನಗರದ ಜಿಎಸ್‌ಎಸ್ ಯೋಗ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವೃಕ್ಷ-ರಕ್ಷಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು.
ಜಿಎಸ್‌ಎಸ್ ಯೋಗ ಸಂಸ್ಥೆಯು ಕೇವಲ ಯೋಗದ ಬಗ್ಗೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸದೆ ಪರಿಸರದ ಸಂರಕ್ಷಣೆಗೂ ಆದ್ಯತೆ ನೀಡಿರುವುದು ನಿಜಕ್ಕೂ ಹೆಮ್ಮೆ ಪಡುವಂತ ವಿಷಯವಾಗಿದೆ.
ಸಾವಿರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳಿಗೆ ಸಸಿಗಳನ್ನು ನೀಡಿ ಪಾಲನೆ, ಪೋಷಣೆ ಮಾಡುವಂತೆ ಅವರಲ್ಲಿ ಜಾಗೃತಿಯ ಬೀಜ ಬಿತ್ತುತ್ತಿರುವುದು ಉತ್ತಮ ಸಮಾಜ ಸೇವೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ರಾಜ್ಯ ಹಾಗೂ ನಾನಾ ದೇಶಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅಮೇರಿಕಾ ಯೋಗ ವಿಶ್ವ ವಿದ್ಯಾಲಯದ ರಿಜಿಸ್ಟರ್ ಪಿ.ಎಸ್.ರವಿ, ಯುವಿಡಬ್ಲುೃ ಲಾಜಿಸ್ಟಿಕ್‌ನ ಸುಧೀರ್, ಜಿಎಸ್‌ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ, ಜಿಎಸ್‌ಎಸ್ ಯೋಗ ಸಂಸ್ಥೆಯ ಟೀಮ್ ಹೆಡ್ ಜಿ.ಬಿ.ರೂಪಾಶ್ರೀ, ಪರ್ತಕರ್ತರಾದ ಸಿ.ಕೆ.ಮಹೇಂದ್ರ, ಧರ್ಮಾಪುರ ನಾರಾಯಣ, ಮುಖಂಡರಾದ ರವಿ, ಬಿ.ಎನ್. ಸುಧೀರ್, ಯೋಗಿ ದೇವರಾಜ್, ಕೃಷ್ಣ ಇತರರು ಇದ್ದರು.