ರಾಮನಗರ: ಬಿಡದಿಯ ನಿತ್ಯಾನಂದ ಆಶ್ರಮಕ್ಕೆ ಅತಿಕ್ರಮ ಪ್ರವೇಶ ಮಾಡಿದ ಮೂವರ ವಿರುದ್ಧ ಆಶ್ರಮದ ಭಕ್ತರೊಬ್ಬರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೆಂಕಚಾಚಲಪತಿ, ಸುರೇಂದರ್ ಸೇರಿದಂತೆ ಮೂವರ ವಿರುದ್ಧ ನಿತ್ಯಾನಂದ ಆಶ್ರಮದ ಭಕ್ತ ಸೋಮಾ ದಯಾನಂದ ದೂರು ನೀಡಿದವರು.
ಫೆ.27ರಂದು ಬೆಳಗ್ಗೆ ವೆಂಕಟಾಚಲಪತಿರವರು ಸರ್ಕಾರಿ ಸರ್ವೆಯರ್ ಗಳೆಂದು ಹೇಳಿಕೊಂಡು ತನ್ನ ಇಬ್ಬರು ಸಹಚರರೊಂದಿಗೆ ನಿತ್ಯಾನಂದ ಪೀಠಂ ಆಶ್ರಮಕ್ಕೆ ಅತಿಕ್ರಮ ಪ್ರವೇಶ ಮಾಡಿ ದೇವಸ್ಥಾನದ ದಕ್ಷಿಣ ಭಾಗದ ಗೋಡೆಯನ್ನು ಕೆಡವಿದ್ದಾರೆ. ಕ್ಯಾಂಪಸ್ ನೊಳಗೂ ಪ್ರವೇಶಿಸಿ ಮಹಿಳಾ ಸನ್ಯಾಸಿಗಳಾದ ನಿರಮಯಾ ಮತ್ತು ದಯಾಮಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರಲ್ಲದೆ, ಪುರುಷ ಸನ್ಯಾಸಿಗಳಿಗೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೋಮಾ ದಯಾನಂದ ದೂರಿನಲ್ಲಿ ತಿಳಿಸಿದ್ದಾರೆ.