Friday, April 4, 2025
Google search engine

Homeರಾಜ್ಯಸುದ್ದಿಜಾಲಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ: ಸಾಹಿತಿ ಬನ್ನೂರು ಕೆ ರಾಜು ಅಭಿಪ್ರಾಯ

ಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ: ಸಾಹಿತಿ ಬನ್ನೂರು ಕೆ ರಾಜು ಅಭಿಪ್ರಾಯ

ಹುಣಸೂರು: ಬುಡಕಟ್ಟು ನಮ್ಮ ಮಾನವ ಕುಲದ ಮೂಲ ನೆಲೆ ಎಂದು ಸಾಹಿತಿ ಹಿರಿಯ ಪತ್ರಕರ್ತರಾದ ಬನ್ನೂರು ಕೆ ರಾಜು ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್, ತಾಲ್ಲೂಕು ಘಟಕ ಹುಣಸೂರು ಹಾಗೂ ಕನ್ನಡ ವಿಭಾಗ ವತಿಯಿಂದ ವಿಶ್ವ ಬುಡಕಟ್ಟು ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬುಡಕಟ್ಟು ಅಂದರೆ ಒಗ್ಗಟ್ಟು, ಸಂಸ್ಕಾರ , ಸಂಸ್ಕೃತಿಯ ಪ್ರತೀಕ.ಇದು ಒಂದು ವಿಶಿಷ್ಟ ಮಾನವ ಜನಾಂಗ,ಮಾನವ ಕುಲದ ಅಸ್ಮಿತೆ ಒಂದೇ ದೇವರು ಒಂದೇ ಧರ್ಮವನ್ನುಳ್ಳ ನಾಗರೀಕತೆ ಅವರು ಕೊಟ್ಟ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ ಕಲೆ ಸಾಹಿತ್ಯ ಸಂಸ್ಕೃತಿಯ ಎಲ್ಲದರಲ್ಲೂ ಬುಡಕಟ್ಟುವಿನ ಕೊಡುಗೆಯಿದೆ ಒಂದು ನೈತಿಕತೆಯನ್ನು ಇಟ್ಟುಕೊಂಡು ಬಾಳುತ್ತಿರುವ ವಿಶಿಷ್ಟ ಸಮುದಾಯ ಎಂದರು.

ಬುಡಕಟ್ಟು ಸಮುದಾಯ ಕೂಡಿ ಬಾಳುವ ಸಂಸ್ಕೃತಿ ಮನುಷ್ಯತ್ವದ ಪಾಠ ಹೇಳುವ ಜನಾಂಗ. ಇವರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ಹೆಚ್ಚಿನ ಸೌಲಭ್ಯ ನೀಡುವ ಮೂಲಕ ಅವರ ಬದುಕನ್ನು ಸುಧಾರಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಅಧ್ಯಕ್ಷರಾದ ಕ್ಯಾತನಹಳ್ಳಿ ಪ್ರಕಾಶ್ ಎಚ್ ಮಾತನಾಡುತ್ತಾ ಆದಿವಾಸಿ ಒಂದು ವಿಶಿಷ್ಟವಾದ ಬುಡಕಟ್ಟು 1994 ಆಗಸ್ಟ್ 9 ರಂದು ವಿಶ್ವ ಬುಡಕಟ್ಟು ದಿನಾಚರಣೆಯನ್ನು ಘೋಷಣೆ ಮಾಡಿದ ನಂತರ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ.

ಗಡಿನಾಡಿನ ಸೋಲಿಗರನ್ನು ಜಾಗೃತಿಗೊಳಿಸುವ ಮೂಲಕ ಅವರಲ್ಲಿ ಬದಲಾವಣೆಯನ್ನು ತಂದವರು ಡಾ.ಸುದರ್ಶನ್ ಕಾಡಂಚಿನಲ್ಲಿ ಮರಗಿಡ ಪಶು ಪಕ್ಷಿ ಪ್ರಾಣಿಗಳೊಂದಿಗೆ ಜೀವನ ನಡೆಸುವ ಒಂದು ವಿಶಿಷ್ಟವಾದ ಜನ ಸಮುದಾಯ ಈ ಬುಡಕಟ್ಟು ಇತ್ತೀಚೆಗೆ ರಾಜ್ಯ ಸರ್ಕಾರ 62 ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ತೊಲಯ್ಯ, ಜಯಪ್ಪ, ಕಿರುಮಿದಿ , ಗೌರಮ್ಮ ರನ್ನು ಸನ್ಮಾನಿಸಲಾಯಿತು. ಬುಡಕಟ್ಟು ಜನ ಸಮುದಾಯಕ್ಕೆ ಸೇವೆ ಮಾಡುತ್ತಿರುವ ಡಾ.ಎಸ್.ಶ್ರೀಕಾಂತ್ ರನ್ನು ಗೌರವಿಸಲಾಯಿತು.

ಸಿಂಗೇಶ್, ಮಹೇಶ್ ಚಿಲ್ಕುಂದ,ಡಾ.ಸೋಮಶೇಖರ ಮಲರಾ ಹಾಗೂ ಪ್ರವೀಣ್ ತಂಡದವರು ಜಾನಪದ ಗೀತಗಾಯನ ನಡೆಸಿಕೊಟ್ಟರು.ಕುಮಾರಿ ಇಂಚರ ಭರತನಾಟ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪುಟ್ಟಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರವಿಗೌಡ ಇದ್ದರು. ಬಸವಲಿಂಗಸ್ವಾಮಿ ಎಂ,ಆರ್ ಡಾ.ನಂಜುಂಡಸ್ವಾಮಿ ಬಿ.ಡಾ.ವಿಶ್ವನಾಥ್ ಹೆಚ್.ಆರ್. ಡಾ.ಕರುಣಾಕರ್ ಎನ್.ಡಾ.ಪ್ರಸನ್ನ ಕೆ.ಪಿ ಲಕ್ಷ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.

ನೂರುನ್ನಿಸ ಪ್ರಾರ್ಥನೆ ಮಾಡಿದರೆ ಬಸವಲಿಂಗಸ್ವಾಮಿ ಸ್ವಾಗತಿಸಿದರು ಕಾರ್ಯಕ್ರಮವನ್ನು ಡಾ.ನಂಜುಂಡಸ್ವಾಮಿ ನಿರೂಪಣೆ ಮಾಡಿಕೊಟ್ಟರು.

RELATED ARTICLES
- Advertisment -
Google search engine

Most Popular