ಮೈಸೂರು: ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಇಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ
ಭಾರತೀಯ ಜಲ ಸೇನೆಗೆ ಆಯ್ಕೆ ಆಗಿರುವ ಸೈನಿಕ ಅಕಾಡೆಮಿ ಅಭ್ಯರ್ಥಿಗಳಾದ ಬೆಳವಾಡಿ ಗ್ರಾಮದ ಅಬಿನ್, ಹುಣಸೂರಿನ ನಿಜಾಮ್ ಎಂ ಐ, ಕುಶಾಲನಗರದ ಅಂಟೊರೊಸ್ ರವರಿಗೆ ಗೌರವ ಸನ್ಮಾನಿಸಿದ
ಸೈನಿಕ ಅಕಾಡೆಮಿಯ ಸಂಸ್ಥಾಪಕರು ಕಮಾಂಡೋ ಶ್ರೀಧರ ಸಿ ಎಂ ರವರು ಬಳಿಕ ಮಾತನಾಡಿ ನಮ್ಮ ದೇಶದ ಸೈನಿಕರು ಅಂದರೆ ಭೂ ಸೇನೆಯ ಸೈನಿಕರೆಂದು ತಿಳಿಯುತ್ತಾರೆ, ಆದರೆ ಸೇನೆಯಲ್ಲಿ 3 ವಿಭಾಗದ ಸೈನಿಕರು ಇರುತ್ತಾರೆ, ಭೂ ಸೇನಾ, ವಾಯು ಸೇನಾ ಮತ್ತು ಜಲ ಸೇನಾ, ಈ 3 ವಿಭಾಗಕ್ಕೂ ಸೇನೆ (ಮಿಲಿಟರಿ) ಎಂದು ಕರೆಯಲಾಗುತ್ತದೆ.

ಸೈನಿಕ ಅಕಾಡೆಮಿಯಲ್ಲಿ ನೀಡುತ್ತಿರುವ ತರಬೇತಿಯಿಂದ ಈ ಬಾರಿ ಜಲ ಸೇನೆಗೂ ಆಯ್ಕೆ ಆಗಿರುವುದು ಬಹಳ ಸಂತೋಷ ತಂದಿದೆ, ದೇಶ ಸೇವೆ ಈಶ ಸೇವೆ ಎಂದು ಸೇವೆಗೆ ತೆರಳುತ್ತಿರುವ ಯುವ ಸೈನಿಕರಿಗೆ ಗೌರವ ಸನ್ಮಾನ ಮಾಡವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಒಂದು ಸನ್ಮಾನ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರುಗಳು, ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತಿ ಇದ್ದರು.