Friday, April 18, 2025
Google search engine

Homeರಾಜ್ಯಸುದ್ದಿಜಾಲಮೈಸೂರಿನ ವಿ ವಿ ಮೊಹಲ್ಲಾದ ಪತ್ರಿಕಾ ವಿತರಕರಿಂದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರಿನ ವಿ ವಿ ಮೊಹಲ್ಲಾದ ಪತ್ರಿಕಾ ವಿತರಕರಿಂದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಮೈಸೂರಿನ ವಿ ವಿ ಮೊಹಲ್ಲಾದಲ್ಲಿರುವ ಒಂಟಿಕೊಪ್ಪಲ್ ಪತ್ರಿಕಾ ವಿತರಣಾ ಕೇಂದ್ರ ಹಾಗೂ ಹೆಸರಾಂತ ವೆಂಕಟರಮಣ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಪದೇಶದಲ್ಲಿ ದಸರಾ, ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ಅಂಗವಾಗಿ ವರ್ಷದ 365 ದಿನದಲ್ಲಿಯೂ ನಿರಂತರವಾಗಿ ಸ್ವಚ್ಛತೆಯ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಆತ್ಮೀಯ ಪೌರಕಾರ್ಮಿಕರಿಗೆ ಮೈಸೂರಿನ ವಿ ವಿ ಮೊಹಲ್ಲಾದ ಪತ್ರಿಕಾ ವಿತರಣಾ ಕೇಂದ್ರದ ಎಲ್ಲಾ ವಿತರಕರು ಹಾಗು ಆತ್ಮೀಯರ ವತಿಯಿಂದ ಇಂದು ಆತ್ಮೀಯವಾಗಿ ಸನ್ಮಾನಿಸಿ ಅವರಿಗೆ ನೆನಪಿನ ಕಾಣಿಕೆ ಹಾಗು ಸಿಹಿ ನೀಡಿ ಗೌರವಿಸಲಾಯಿತು.

ಈ ವೇಳೆ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ, ಎ .ರವಿ ಮಾತನಾಡಿ ಇಂಥ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಈ ಪೌರಕಾರ್ಮಿಕರ ಸೇವೆಯನ್ನು ನೆನೆದು ಮೈಸೂರಿನ ಪ್ರತಿ ವಾರ್ಡಿನಲ್ಲೂ ಪೌರಕಾರ್ಮಿಕರಿಗೆ ಆತ್ಮಸ್ಥೈರ್ಯ ಹಾಗೂ ಪ್ರೀತಿ ತೋರಿದರೆ ಎಲ್ಲರೂ ಮನ ಸಂತೋಷದಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಮೈಸೂರು ಮತ್ತೊಮ್ಮೆ ಸ್ವಚನಗರ ಎಂಬ ಕೀರ್ತಿ ಗಳಿಸಲು ಅನುಕೂಲವಾಗುತ್ತದೆ ಎಂದು ನುಡಿದರು.

RELATED ARTICLES
- Advertisment -
Google search engine

Most Popular