Saturday, October 4, 2025
Google search engine

Homeರಾಜ್ಯಸುದ್ದಿಜಾಲಡಾ.ಡಿ. ನಟರಾಜ್ ಅವರಿಗೆ ಬಿಳ್ಕೊಡುಗೆ: ಆರೋಗ್ಯ ಇಲಾಖೆಯಲ್ಲಿ ಯಶಸ್ವಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗೆ ಗೌರವ

ಡಾ.ಡಿ. ನಟರಾಜ್ ಅವರಿಗೆ ಬಿಳ್ಕೊಡುಗೆ: ಆರೋಗ್ಯ ಇಲಾಖೆಯಲ್ಲಿ ಯಶಸ್ವಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗೆ ಗೌರವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅನುಷ್ಠಾನ ಮಾಡುವಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ..ನಟರಾಜ್ ಯಶಸ್ವಿಯಾಗಿದ್ದರು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಅವರಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಅಭಿನಂದಿಸಿ ಮಾತನಾಡಿದರು.

ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನರಿಗೆ ತಲುಪ ರೀತಿಯಲ್ಲಿ ನೋಡಿ ಕೊಳ್ಳುತ್ತಿದ್ದರು. ಇವರ ವರ್ಗಾವಣೆ ನನಗೆ ಬೇಸರ ತರಿಸಿದೆ ಎಂದು ನೋವಿನಿಂದ ಮಾತನಾಡಿದರು.

ಯಾವುದೇ ಇಲಾಖೆ ಕಾರ್ಯಕ್ರಮಗಳು ಸಮುದಾಯ ಸಹ ಭಾಗಿತ್ವದಲ್ಲಿ ಜನರಿಗೆ ತಲುಪ ಬೇಕಾದರೆ ಆ ಇಲಾಖೆಯ ಮುಖ್ಯಸ್ಥರು ಸಂಪೂರ್ಣ ಜವಾಬ್ದಾರಿ ಹೊರ ಬೇಕಾಗಿರುತ್ತದೆ, ಅಂತಹದರಲ್ಲಿ ತಾಲ್ಲೂಕು ಆರೋಗ್ಯಾಓ ಡಾ.ಡಿ.ನಟರಾಜ್ ಅವರು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಎಲ್ಲ ಮುಖಂಡರ ಜೊತೆ ಒಡನಾಟ ಇಟ್ಟು ಕೊಂಡು ಆರೋಗ್ಯ ಇಲಾಖೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿದ್ದಾರೆ ಎಂದರು.

ಆರೋಗ್ಯ ಇಲಾಖೆಯ ಹತ್ತು ಹಲವು ಜನಪರ ಕಾರ್ಯಕ್ರಮಗಳು ಅನುಷ್ಠಾನ ಮಾಡುವುದರ ಜೊತೆಗ
ತಾಲೂಕಿನ ವೈದ್ಯರು, ಆರೋಗ್ಯ ಸಹಾಯಕಿರು, ಆಶಾ ಕಾರ್ಯಕರ್ತೆಯರ ಜೊತೆ ಪ್ರೀತಿ ವಿಶ್ವಾಸದಿಂದ ಮನೆ ಮನೆಗೆ ಯೋಜನೆಗಳು ತಲುಪುವಂತೆ ಮಾಡಿದ್ದಾರೆ. ಆದ್ದರಿಂದ ಡಾ.ಡಿ.ನಟರಾಜ್ ಅವರ ಕಾರ್ಯ ವೈಖರಿ ನನಗೆ ಮೆಚ್ಚುಗೆ ಆಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಗೆ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಬಂದು ನಿಮ್ಮಗಳ ಸೇವೆಗೆ ಮುಂದಾಗಲಿ ಎಂದು ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಪತ್ನಿ ಡಾ.ಪ್ರತಿಮಾ ದಂಪತಿಗಳಿಗೆ ವಿವಿದ ಇಲಾಖೆಯ ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಹಾರಹಾಕಿ ಅಭಿನಂದಿಸಿ ಬಿಳ್ಕೊಟ್ಟರು.

ತಹಸೀಲ್ದಾರ್ ಜೆ. ಸುರೇಂದ್ರ ಮೂರ್ತಿ, ತಾ.ಪಂ.ಇಓ ಗಳಾದ ಕುಲದೀಪ್, ಎ.ರವಿ, ಬಿಇಓ ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಶಂಕರ್ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಸಿ‌.ನಟರಾಜು, ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನವೀನ್,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಕೆ.ವಿ.ರಮೇಶ್ ಚೀರನಹಳ್ಳಿ ಉಮೇಶ್, ನಿರ್ದೇಶಕರಾದ ಶಶಿಕಾಂತ್,, ತಾ.ಪಂ.ವ್ಯವಸ್ಥಾಪಕ ಸತೀಶ್, ಗಂಗಾಧರ್, ಜಯಲಕ್ಷ್ಮಿ, ಶಿಲ್ಷಯ ಇಲಾಖೆಯ ಲೋಕೇಶ್, ಹಿರಿಯ ಔಷಧಿ ನಿಯಂತ್ರಣಾಧಿಕಾರಿ ಆನಂದ್, ಹಿರಿಯ ಆರೋಗ್ಯ ಸುರಕ್ಷ ಅಧಿಕಾರಿ ಪಾರ್ವತಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಬಿಪಿಎಂ ರೇಖಾ, ಶೋಭಾ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular