Friday, April 18, 2025
Google search engine

HomeUncategorizedಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ದಂಪತಿಗಳಿಗೆ ಸನ್ಮಾನ

ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ದಂಪತಿಗಳಿಗೆ ಸನ್ಮಾನ

ಕೆ.ಆರ್.ನಗರ: ಕರ್ನಾಟಕ ಪ್ರೆಸ್ ಕ್ಲಬ್ ಕೆ.ಆರ್.ನಗರ ತಾಲೂಕು ಘಟಕದ ವತಿಯಿಂದ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ನಡೆದ ೨೦೨೩ ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಘಟಕದ ಅಧ್ಯಕ್ಷ ಹಾಗೂ ಆಂದೋಲನ ದಿನಪತ್ರಿಕೆಯ ಸಾಲಿಗ್ರಾಮ ತಾಲೂಕು ವರದಿಗಾರರಾದ
ಕೆ.ಟಿ.ಮೋಹನ್ ಕುಮಾರ್ ಮತ್ತು ಅವರ ಪತ್ನಿ ಎಸ್.ಜಿ.ಸೌಮ್ಯ ಅವರುಗಳನ್ನು ಶಾಸಕ ಡಿ.ರವಿಶಂಕರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು
ಕೆ.ರಾಜು, ಕೆ.ಎಂ.ಹರ್ಷವರ್ಧನ, ಪ್ರೆಸ್ ಕ್ಲಬ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ದಯಾನಂದ, ಕಾರ್ಯಾಧ್ಯಕ್ಷ ಖಾಜಾ ಹುಸೇನ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎನ್.ತುಳಸಿ ಕುಮಾರ್, ಸಂಚಾಲಕ ಎಂ.ಎಸ್.ನರಸಿಂಹ, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ನ ಸಿಇಒ ಮಮತಾ, ಸಿಂಧು, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ನಿವೃತ್ತ ಶಿಕ್ಷಕ ಸಿದ್ದರಾಮೇಗೌಡ, ಮುಖಂಡ ವೀರಭದ್ರ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular