Tuesday, April 8, 2025
Google search engine

Homeಸ್ಥಳೀಯಶ್ಲೋಕ ಪಠಣ ದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ಗೆ ಸನ್ಮಾನ

ಶ್ಲೋಕ ಪಠಣ ದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ಗೆ ಸನ್ಮಾನ

ಮೈಸೂರು: ಶ್ಲೋಕ ಪಠಣ ದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ರವರನ್ನು ಮೈಸೂರಿನ ವಿಶ್ವ ಹಿಂದೂ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇತ್ತಿಚೆಗೆ ಮೂರು ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ರವರನ್ನು ಅವರ ಮನೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಕಾಮತ್, ಕಾರ್ಯದರ್ಶಿ ಮಧುಶಂಕರ್, ಸಹಕಾರ್ಯದರ್ಶಿ ಶ್ರೀಮತಿ ಜಯಶ್ರೀ ಶಿವರಾಂ, ಮಾರ್ಗದರ್ಶಕರಾದ ಸುಬ್ರಹ್ಮಣ್ಯ ಜಟ್ಟಪ್ಪ, ಮಂದಿರ ಅರ್ಚಕ ಪುರೋಹೀತ ವಿಭಾಗದ ಜನಾರ್ದನ ರಾವ್, ಸೇವಾ ವಿಭಾಗದ ಲೋಕೇಶ್, ಹಿರಿಯ ಆಯುರ್ವೇದ ವೈದ್ಯ ರಾದ ಡಾ. ಕೇಶವಮೂರ್ತಿ, ಪ್ರಸಾರ ವಿಭಾಗದ ಶಿವು, ಸತ್ಸಂಗ ಪ್ರಮುಖರಾದ ಶ್ರೀಮತಿ ರಾಧಾ ಲಕ್ಷ್ಮಣರಾಜು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಕಾಮತ್ ರವರು ನಾವು ಇಂದು ಮನೆಗಳಲ್ಲಿ ಸಂಸ್ಕಾರ ಮರೆಯುತ್ತಿರುವ ಸಂದರ್ಭದಲ್ಲಿ ಪೃಥು ಪಿ ಅದ್ವೈತ್ 30 ನಿಮಿಷದಲ್ಲಿ 150 ಶ್ಲೋಕಗಳನ್ನು ಹೇಳಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ ಎಂದರೆ ಅದು ಹೆಮ್ಮೆಯ ವಿಷಯ, ನಾವೆಲ್ಲರೂ ಮನೆಯಲ್ಲಿ ಸಂಸ್ಕಾರಗಳ ಆಚರಣೆ ಮಾಡುವುದು ಎಷ್ಟು ಮುಖ್ಯ ಎಂಬುದು ಇದರಿಂದ ತಿಳಿಯುತ್ತದೆ. ಇಂತಹ‌ ಸಾಧನೆಗಳನ್ನು ವಿಶ್ವ ಹಿಂದೂ ಪರಿಷತ್ ಒಂದು ಧಾರ್ಮಿಕ ಸಂಘಟನೆಯಾಗಿ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಜಟ್ಟಪ್ಪ ರವರು ವೇದ, ಭಗವದ್ಗೀತೆ ಕಲಿತವರು ಎಂದೆಂದಿಗೂ ಸಂಸ್ಕಾರ ವಂಚಿತರಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೃಥು ಪಿ ಅದ್ವೈತ್ ರವರ ಕುಟುಂಬದವರು, ಪ್ರೋ. ಮಹೇಶಪ್ಪ, ರಾಮಕೃಷ್ಣ, ಪಾರ್ಶ್ವನಾಥ್ ಜೈನ್ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular